ಮನೆ ಮನರಂಜನೆ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರಾ ಸಾರಾ ತೆಂಡೂಲ್ಕರ್ ?

ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರಾ ಸಾರಾ ತೆಂಡೂಲ್ಕರ್ ?

0

ಮುಂಬೈ (Mumbai)-ವಿಶ್ವ ಕಂಡ ಅಪ್ರತಿಮ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.
ಸಾರಾ ತೆಂಡೂಲ್ಕರ್ ನಟನಾ ತರಬೇತಿ ಪಡೆಯುತ್ತಿದ್ದು, ಸಿನಿಮಾಗಳಲ್ಲಿ ಅದೃಷ್ಟ ಹುಡುಕಲು ಸಾರಾ ನಿಶ್ಚಯಿಸಿದ್ದಾರೆ. ಸಾರಾಳ ನಿರ್ಣಯಕ್ಕೆ ತಂದೆ ಸಚಿನ್, ತಾಯಿ ಅಂಜಲಿಯ ಒಪ್ಪಿಗೆ ಇದೆಯಂತೆ. ಸಾರಾಳ ತರಬೇತಿಯನ್ನು ತಾಯಿ ಅಂಜಲಿಯೇ ಸೂಪರ್‌ವೈಸ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಸಾರಾ ತೆಂಡೂಲ್ಕರ್‌ಗೆ ಈ ಹಿಂದೆ ಬಾಲಿವುಡ್‌ನಿಂದ ಸಾಕಷ್ಟು ಅವಕಾಶಗಳು ಬಂದಿದ್ದವು ಆದರೆ ತಾಯಿ ಅಂಜಲಿ ಅವನ್ನು ಬೇಡವೆಂದಿದ್ದರು. ಮಗಳು ಇನ್ನಷ್ಟು ದೊಡ್ಡವಳಾದ ಬಳಿಕ ಸಿನಿಮಾ ರಂಗ ಪ್ರವೇಶಿಸಲಿ ಎಂಬುದು ಅಂಜಲಿಯ ಆಸೆಯಾಗಿತ್ತಂತೆ.
ಸಾರಾ ಕೆಲ ತಿಂಗಳ ಹಿಂದೆ ಬ್ರ್ಯಾಂಡ್ ಒಂದಕ್ಕೆ ಮಾಡೆಲ್ ಆಗಿ ಕಾಣಿಸಿಕೊಂಡಿದ್ದರು. ಅದರ ಹೊರತಾಗಿ ಹೆಚ್ಚಾಗಿ ಹೊರಗೆಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಬಾಲಿವುಡ್ ಪ್ರವೇಶದ ಬಗ್ಗೆ ಸದ್ದಿಯಾಗುತ್ತಿದೆ‌.
ಸಾರಾ ಲಂಡನ್‌ನಲ್ಲಿ ಮೆಡಿಸಿನ್‌ ಪದವಿ ಪಡೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 1.9 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಸಾರಾ ತೆಂಡೂಲ್ಕರ್ ಈಗಾಗಲೇ ಸೆಲೆಬ್ರಿಟಿ ಆಗಿದ್ದಾರೆ.