ಮನೆ ಕ್ರೀಡೆ ವಿಶ್ವಕಪ್: ನೆದರ್ಲೆಂಡ್ಸ್ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ ಜಯ

ವಿಶ್ವಕಪ್: ನೆದರ್ಲೆಂಡ್ಸ್ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ ಜಯ

0

ನವದೆಹಲಿ: ನೆದರ್ಲೆಂಡ್ಸ್ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ (104) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅವರ ಶತಕದ ನೆರವಿನಿಂದ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 399 ರನ್ ಕಲೆಹಾಕಿತು.

400 ರನ್ ಗಳ ಗುರಿ ಬೆನ್ನತ್ತಿದ  ನೆದರ್ಲೆಡ್ಸ್ ಆರಂಭಿಕ ಆಟಗಾರ ವಿಕ್ರಮಜಿತ್ ಸಿಂಗ್ 25 ರನ್ ಗಳಿಸಿದ್ದು ಬಿಟ್ಟರೆ, ತಂಡದ ಬೇರಾವುದೇ ಆಟಗಾರ ದೊಡ್ಡ ಮೊತ್ತ ದಾಖಲಿಸಲಿಲ್ಲ. ಮ್ಯಾಕ್ಸ್ ಓಡೌಡ್ (6), ಕಾಲಿನ್ ಅಕರ್ಮನ್ (10), ಸೈಬ್ರಾಂಡ್ ಎಂಗಲ್ಬ್ರೆಕ್ಟ್ (11), ಬಾಸ್ ಡಿ ಲೀಡೆ (4), ಲೋಗನ್ ವ್ಯಾನ್ ಬೀಕ್ (0), ರೋಲೋಫ್ ವ್ಯಾನ್ ಡೆರ್ ಮೆರ್ವೆ (0), ಆರ್ಯನ್ ದತ್ತ್ (1), ಪಾಲ್ ವ್ಯಾನ್ ಮೀಕೆರೆನ್ (0) 15 ರನ್ ಕೆಲೆಹಾಕಿದರು. ನಾಯಕ ಸ್ಕಾಟ್ ಎಡ್ವರ್ಡ್ಸ್ (12) ಅಜೇಯವಾಗುಳಿದರೂ ಏನು ಪ್ರಯೋಜನ ಆಗಲಿಲ್ಲ.

21 ಓವರ್ ಗೆ 90 ರನ್ ನೆದರ್ಲೆಂಡ್ಸ್ ಆಲ್ ಔಟ್ ಆಗಿತ್ತು ಆಸ್ಟ್ರೇಲಿಯಾ ತಂಡ 309 ರನ್  ಗಳಿಂದ ಗೆದ್ದು ಹೊಸ ದಾಖಲೆ ಬರೆಯಿತು.