ಮನೆ ರಾಜ್ಯ ನವೆಂಬರ್ 1ರ ಬಳಿಕ ಚರ್ಚೆಗೆ ದಿನಾಂಕ ನಿಗದಿಪಡಿಸಿ: ಡಿಸಿಎಂ ಡಿ.ಕೆ ಶಿವಕುಮಾರ್

ನವೆಂಬರ್ 1ರ ಬಳಿಕ ಚರ್ಚೆಗೆ ದಿನಾಂಕ ನಿಗದಿಪಡಿಸಿ: ಡಿಸಿಎಂ ಡಿ.ಕೆ ಶಿವಕುಮಾರ್

0

ಬೆಂಗಳೂರು: ಚರ್ಚೆಗೆ ಸಮಯ ಫಿಕ್ಸ್​ ಮಾಡಿ. ನವೆಂಬರ್​ 1ರ ನಂತರ ಯಾವ ದಿನಾಂಕವಾದ್ರೂ ನಿಗದಿಪಡಿಸಿ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಚರ್ಚೆಗೆ ಒಪ್ಪಿದ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ​ಕೂಡ ಬಹಿರಂಗ ಚರ್ಚೆಗೆ ಒಪ್ಪಿಗೆ ಸೂಚಿಸಿ ಸಮಯ ನಿಗದಿಪಡಿಸುವಂತೆ ಹೇಳಿದ್ದಾರೆ.

ಇಂದು ತಮ್ಮ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಡಿ.ಕೆ ಶಿವಕುಮಾರ್​​ ಪಟಾಲಮ್ ನಿಂದ ರೈತರ ಪರಿಹಾರದಲ್ಲಿ ಲೂಟಿ ಎಂಬ ಹೆಚ್ ​​ಡಿಕೆ ಆರೋಪದ ವಿರುದ್ಧ ವಾಗ್ದಾಳಿ ನಡೆಸಿದರು.

“ಎನೀ ಟೈಮ್​ ಚರ್ಚೆಗೆ ಟೈಮ್​ ಫಿಕ್ಸ್​ ಮಾಡಿ. ನವೆಂಬರ್​ 1ರ ನಂತರ ದಿನಾಂಕ ನಿಗದಿಪಡಿಸಿ. ನಾನು ಏನು ಮಾಡಿದ್ದೇನೆ, ಅವರೇನು ಮಾಡಿದ್ದಾರೆ ಅನ್ನೋದನ್ನು ಅಲ್ಲೇ ಬಿಚ್ಚಿ ಮಾತಾಡೋಣ. ಗಾಳಿಯಲ್ಲಿ ಗುಂಡು ಹೊಡೆಯೋದು, ಹಿಟ್​ ಆಂಡ್​ ರನ್​ ಮಾಡೋದಲ್ಲ” ಎಂದು ಕಿಡಿಕಾರಿದರು.

ಸಮಯ ಫಿಕ್ಸ್​ ಮಾಡಿ. ಅಲ್ಲಿ ಬಂದು ಎಲ್ಲವನ್ನೂ ಮಾತಾಡೋಣ ಎಂದು ಹೇಳಿ ಹೆಚ್ ​ಡಿಕೆ ಬೇರೆ ಯಾವುದೇ ಆರೋಪಗಳಿಗೆ ಪ್ರತಿಕ್ರಿಯಿಸದೇ ಹೊರಟು ಹೋದರು.