ಮನೆ ರಾಜ್ಯ ಮಂಗಳೂರು: ಬ್ರೇಕ್ ವೈಫಲ್ಯದಿಂದ ಪಲ್ಟಿಯಾದ ಹಣ್ಣುಹಂಪಲು ಹೊತ್ತ ಟೆಂಪೊ

ಮಂಗಳೂರು: ಬ್ರೇಕ್ ವೈಫಲ್ಯದಿಂದ ಪಲ್ಟಿಯಾದ ಹಣ್ಣುಹಂಪಲು ಹೊತ್ತ ಟೆಂಪೊ

0

ಮಂಗಳೂರು(ದಕ್ಷಿಣ ಕನ್ನಡ): ಹಣ್ಣುಹಂಪಲು ಹೊತ್ತ ಟೆಂಪೊ ಬ್ರೇಕ್ ವೈಫಲ್ಯದಿಂದಾಗಿ ಪಲ್ಟಿಯಾದ ಘಟನೆ ಮುಡಿಪು ಮಿತ್ತಕೋಡಿಯಲ್ಲಿ ನಡೆದಿದೆ.

ಟೆಂಪೊದಲ್ಲಿ ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಿಂದ ಮೆಲ್ಕಾರ್ ಕಡೆಗೆ ಹಣ್ಣುಹಂಪಲು ಸಾಗಿಸಲಾಗುತ್ತಿತ್ತು. ಬ್ರೇಕ್ ವೈಫಲ್ಯಕ್ಕೀಡಾದ ವಾಹನ ಚಾಲಕನ ನಿಯಂತ್ರಣ ತಪ್ಪಿ ಐದು ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿದೆ. ಟೆಂಪೊ ಚಾಲಕನಿಗೆ ಗಾಯಗಳಾಗಿವೆ. ರಸ್ತೆಯಿಡೀ ಹಣ್ಣುಹಂಪಲುಗಳು ಚೆಲ್ಲಿದೆ.

ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.