ಮನೆ ಸುದ್ದಿ ಜಾಲ 10ನೇ ತರಗತಿ ಪರೀಕ್ಷೆ ಬರೆದ ಶಾಸಕ

10ನೇ ತರಗತಿ ಪರೀಕ್ಷೆ ಬರೆದ ಶಾಸಕ

0

ಕಂಧಮಾಲ್ (ಒಡಿಶಾ): ಒಡಿಶಾದ ಫುಲ್ಭಾನಿಯ ಶಾಸಕ ಅಂಗದ ಕನ್ಹರ್ ತಮ್ಮ 58ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದು ಇತರರಿಗೆ ಮಾದರಿಯಾಗಿದ್ದಾರೆ.

​ಒಡಿಶಾದಲ್ಲಿ ಶುಕ್ರವಾರದಿಂದ 10ನೇ ತರಗತಿ ಅಥವಾ ಪ್ರೌಢಶಾಲಾ ಪ್ರಮಾಣಪತ್ರ (ಎಚ್​​​ಎಸ್​ಸಿ) ಅಂತಿಮ ಪರೀಕ್ಷೆಗಳು ಆರಂಭವಾಗಿವೆ. ಜನಪ್ರತಿನಿಧಿಗಳು ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರಾಗಿ ತೆರಳಿ ಪರಿಶೀಲನೆ ನಡೆಸುವುದು ಸಾಮಾನ್ಯ. ಆದರೆ, ಆಡಳಿತಾರೂಢ ಬಿಜೆಡಿ ಶಾಸಕ ಅಂಗದ ಕನ್ಹರ್​ ಮಕ್ಕಳಂತೆ ಹಾಲ್‌ ಟಿಕೆಟ್‌ ಪಡೆದು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದರು.

ಕಂಧಮಾಲ್​ ಜಿಲ್ಲೆಯ ಪಟಿಭಾರಿ ಗ್ರಾಮದಲ್ಲಿ ನಡೆದ ಕೇಂದ್ರದಲ್ಲಿ ಬೆಳಗ್ಗೆ 8 ಗಂಟೆಗೆ ಸರಿಯಾಗಿ ಪರೀಕ್ಷೆಗೆ ಶಾಸಕರು ಕುಳಿತಿದ್ದಾರೆ. 1978ರಲ್ಲಿ ಅರ್ಧಕ್ಕೆ ಓದು ನಿಲ್ಲಿಸಿದ್ದು ದಶಕಗಳ ಬಳಿಕ ಕ್ರಮ ಸಂಖ್ಯೆಗೆ ಅನುಗುಣವಾಗಿ ಎಕ್ಸಾಂ ಮುಗಿಸಿದರು. ಇವರನ್ನೇ ಮಾದರಿಯಾಗಿಸಿಕೊಂಡ ಕೆಲ ಸ್ನೇಹಿತರು ಮತ್ತು ಸ್ಥಳೀಯ ಸರ್​ಪಂಚ್​ಗಳೂ ಕೂಡಾ ಪರೀಕ್ಷೆ ಬರೆದು ಗಮನ ಸೆಳೆದರು.