ಮನೆ ಮನರಂಜನೆ ‘ಆಸೆ’ ಧಾರಾವಾಹಿ ನಿರ್ಮಾಣ ಮಾಡುತ್ತಿರುವ ರಮೇಶ್ ಅರವಿಂದ್

‘ಆಸೆ’ ಧಾರಾವಾಹಿ ನಿರ್ಮಾಣ ಮಾಡುತ್ತಿರುವ ರಮೇಶ್ ಅರವಿಂದ್

0

ಹೊಸ ಹೊಸ ಧಾರಾವಾಹಿ ಮೂಲಕ ಪ್ರೇಕ್ಷಕರನ್ನು ರಂಜಿಸಲು ವಾಹಿನಿಗಳು ಪ್ರಯತ್ನಿಸುತ್ತಲೇ ಇರುತ್ತವೆ. ಆ ಕಾರಣದಿಂದಲೇ ವಿಭಿನ್ನ ಕಾನ್ಸೆಪ್ಟ್ನೊಂದಿಗೆ ಪ್ರೇಕ್ಷಕರ ಮುಂದೆ ಹಲವು ಧಾರಾವಾಹಿಗಳು ಬರುತ್ತಿವೆ. ಈ ಸಾಲಿಗೆ ಈಗ ಮತ್ತೊಂದು ಧಾರವಾಹಿ ಸೇರ್ಪಡೆ ಆಗಲಿದೆ. ಅದು “ಆಸೆ’.

ಹೀಗೊಂದು ಧಾರಾವಾಹಿ ಸ್ಟಾರ್‌ ಸುವರ್ಣದಲ್ಲಿ ಆರಂಭವಾಗಲಿದೆ. ಈಗಾಗಲೇ ಧಾರಾವಾಹಿ ಪ್ರೋಮೋ ಬಿಡುಗಡೆಯಾಗಿದೆ. ವಿಶೇಷವೆಂದರೆ ಈ ಧಾರಾವಾಹಿಯ ನಿರ್ಮಾಣದಲ್ಲಿ ನಟ ರಮೇಶ್‌ ಅರವಿಂದ್‌ ಕೂಡಾ ಕೈ ಜೋಡಿಸಿದ್ದಾರೆ.

ಇದೊಂದು ಸಾಮಾನ್ಯ ವ್ಯಕ್ತಿಯ ಆಸೆ-ಕನಸುಗಳ ಸುತ್ತ ಸಾಗಲಿದೆ. ಧಾರಾವಾಹಿಯಲ್ಲಿ ನಿನಾದ್‌ ಹರಿತ್ಸ ನಾಯಕರಾಗಿ ನಟಿಸುತ್ತಿದ್ದಾರೆ.