ಮನೆ ವ್ಯಕ್ತಿತ್ವ ವಿಕಸನ ಯಾಕೆ ಮರೆಯುತ್ತೇವೆ ?

ಯಾಕೆ ಮರೆಯುತ್ತೇವೆ ?

0

ನಾವೇಕೆ ಮರೆಯುತ್ತೇವೆ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಚೆನ್ನಾಗಿ ನೆನಪಿಟ್ಟುಕೊಳ್ಳಲು ಸಹಾಯಕವಾಗಿದೆ. ಕೆಲವು ವಿಚಾರಗಳನ್ನ ಗಮನಿಸಿ ನೆನಪಿಗೆ ಬಾರದಂತೆ ತಡೆದು ಮರೆಯುತ್ತೇವೆ. ಈ ರೀತಿಯ ಮರೆಯವನ್ನ ʼಉದ್ದೇಶಿತ ಮರೆವುʼ ಎಂದು ಕರೆಯಲಾಗಿದೆ.

ನಿಜವಾಗಿ ಇಂತಹ ನೆನಪುಗಳು ನಮಗೆ ಬೇಡದ ನೆನಪುಗಳಾಗಿರುವುದರಿಂದ ಮರೆಯುವುದೇ ಸೂಕ್ತ. ವ್ಯಕ್ತಿತ್ವ ವಿಕಸದ ದೃಷ್ಟಿಯಿಂದ ಇಂತಹ ನೆನಪುಗಳು ಅಷ್ಟೇನು ಅನುಕೂಲಕಾರಿಯಲ್ಲ. ಎರಡನೆಯದು ಒಳ ನುಸುಳುವಿಕೆಯಿಂದ ಉಂಟಾಗುವ ಮರೆವು. ಪಠ್ಯಕಲಿಕೆಯ ದೃಷ್ಟಿಯಿಂದ ಇದು ಬಹು ಮುಖ್ಯವಾಗಿದೆ. ಒಳನುಸುಳುವಿಕೆಯಿಂದ ಉಂಟಾಗುವ ಮರೆವಿನಲ್ಲಿ ಎರಡು ವಿಧಗಳಿವೆ. ಮೊದಲನೆಯದು ಪುರೋಗಾಮಿ ಮರೆವು. ಹಿಂದೆ ಕಲಿತ ವಿಚಾರಗಳು ಈಗ ಕಲಿತ ವಿಚಾರಗಳೊಂದಿಗೆ ನುಸುಳಿಕೊಂಡು ಈಗ ಕಳಿತ ವಿಚಾರವೂ ಮರೆತು ಹೋದರೆ ಅದು ಪುರೋಗಾಮಿ ಮರೆವು.

ಉದಾರಣೆ 4ನೇ ತರಗತಿಯಲ್ಲಿ ಯಾವುದೋ ರಾಗದಲ್ಲಿ ಒಂದು ಕವಿತೆಯನ್ನು ಕಂಠಪಾಠ ಮಾಡುತ್ತೀರಿ. 8ನೇ ತರಗತಿಯಲ್ಲಿ ಅದೇ ರಾಗದಲ್ಲಿ ಮತ್ತೊಂದು ಕವಿತೆಯನ್ನು ಕಂಠಪಾಠ ಮಾಡಿರುತ್ತೀರಿ. ಆದರೆ 8ನೇ ತರಗತಿಯ ಕವಿತೆಯು ಎರಡು ಸಾಲನ್ನು ಹೇಳಿ ಮೂರನೇ ಸಾಲಿಗೆ ಹೋದಾಗ 4ನೇ ತರಗತಿಗೆ ಕವಿತೆ ಬರಲು ಶುರುವಾಗುತ್ತದೆ. ಇದು ಪುರೋಗಾಮಿ ಮರೆವು. ಇದಕ್ಕೆ ವಿರುದ್ಧವಾದ ಮರೆವು ತಿರೋಗಾಮಿ ಮರೆವು. ಈಗ ಕಲಿತ ವಿಚಾರಗಳ ಒಳನುಸುಳುವಿಕೆಯಿಂದ ಹಿಂದೆ ಕಲಿತ ವಿಚಾರಗಳು ಮರೆತು ಹೋದರೆ ಅದು ತಿರೋಗಾಮಿ ನುಸುಳುವಿಕೆಯ ಮರೆವು.

ಸಾಮಾನ್ಯವಾಗಿ ಕಲಿಯುವ ವಿಚಾರದಲ್ಲಿ ಸಾಮಾನ್ಯ ಅಂಶಗಳು ಇದ್ದಾಗ ಈ ರೀತಿಯ ಮರೆವು ಉಂಟಾಗುತ್ತದೆ. ಆದ್ದರಿಂದ ಸಾಮಾನ್ಯ ಅಂಶಗಳಲ್ಲಿ ಹಿಂದೆ ಕಲಿತ ಮತ್ತು ಈಗ ಕಲಿಯುವ ವಿಚಾರಗಳಲ್ಲಿ ಸ್ಪಷ್ಟವಾಗಿ ವಿಭಜಿಸಿಕೊಂಡು ಕಲಿತ ವಿಚಾರಗಳ ಕುರಿತು ಚಿಂತಿಸದೇ ಇದ್ದರೆ ಮರೆತು ಹೋಗುತ್ತದೆ. ಇದು ಚಿಂತನಾರಾಹಿತ್ಯದ ಮರೆವು ಎನ್ನುತ್ತಾರೆ. ಆದ್ದರಿಂದ ಕಲಿತ ವಿಷಯಗಳನ್ನು ಆಗಾಗ ಚಿಂತಿಸಬೇಕು. ಕಲಿತ ವಿಷಯಗಳನ್ನು ದೀರ್ಘಕಾಲದ ವರೆಗೆ ನೆನಪಿಸಿಕೊಳ್ಳದೆ ಇದ್ದರೆ ಮಬ್ಬಾಗುವ ಕ್ರಿಯೆಯಿಂದ ಮರೆತು ಹೋಗುತ್ತದೆ. ಹೆಚ್ಚು ಹೆಚ್ಚು ವಿಷಯಗಳನ್ನ ತಿಳಿದುಕೊಂಡಾಗ ಗೊಂದಲ ಉಂಟಾಗಿ ಕಲಿತದ್ದು ಮರೆಯುವುದು ವಿರೂಪ ಕ್ರಿಯೆಯ ಮರೆವು. ಇದು ಅತಿಯಾಗಿ ಓದುವವರಿಗೆ ಉಂಟಾಗುವ ಸಮಸ್ಯೆ. ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಇದು ಸಮಸ್ಯೆಯಾಗುವುದಿಲ್ಲ. ದೀರ್ಘ ಅನಾರೋಗ್ಯ ಮತ್ತು ಅತಿಯಾದ ಒತ್ತಡಗಳಿಂದಾಗಿಯೂ ಮರೆವು ಉಂಟಾಗುತ್ತದೆ. ಒತ್ತಡಗಳ ಬಗ್ಗೆ ಸ್ವಲ್ಪ ಉದಾತ್ತವಾಗಿ ಆಲೋಚಿಸಿ ಅದನ್ನ ವೈಚಾರಿಕವಾಗಿ ನಿರ್ವಹಿಸುವ ಕೌಶಲವನ್ನು ಬೆಳೆಸಿಕೊಂಡರೆ ಈ ರೀತಿ ಮರೆವು ಉಂಟಾಗುವುದಿಲ್ಲ.

ಹಿಂದಿನ ಲೇಖನಸಂಘಟನೆ ಬಲಿಷ್ಠವಾಗಿದ್ದರೆ ಮಾತ್ರ ಹಿಂದುಳಿದ ಸಮುದಾಯಗಳು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂದಿನ ಲೇಖನಕನಸಿನಲ್ಲಿ ಕಾಣಿಸಿದಂತೆ ಜಮೀನು ಅಗೆದಾಗ ಗೋಪಾಲಕೃಷ್ಣ ದೇವರ ವಿಗ್ರಹ ಪತ್ತೆ: ದೇವಸ್ಥಾನಕ್ಕೆ ಜಮೀನು ಬಿಟ್ಟುಕೊಟ್ಟ ಮುಸ್ಲಿಂ ವ್ಯಕ್ತಿ