ಮನೆ ಅಪರಾಧ ಸಾಲ ಹಿಂತಿರುಗಿಸುವಂತೆ ಹೇಳಿದ್ದಕ್ಕೆ ತಾಯಿ, ಮಗಳೊಂದಿಗೆ ಅನುಚಿತ ವರ್ತನೆ, ಮಚ್ಚಿನಿಂದ ಹಲ್ಲೆ: ಐವರ ವಿರುದ್ಧ ಎಫ್...

ಸಾಲ ಹಿಂತಿರುಗಿಸುವಂತೆ ಹೇಳಿದ್ದಕ್ಕೆ ತಾಯಿ, ಮಗಳೊಂದಿಗೆ ಅನುಚಿತ ವರ್ತನೆ, ಮಚ್ಚಿನಿಂದ ಹಲ್ಲೆ: ಐವರ ವಿರುದ್ಧ ಎಫ್ ಐಆರ್

0

ಹುಣಸೂರು: ಸಾಲ ಹಿಂದಿರುಗಿಸುವಂತೆ ಕೇಳಿದ ತಾಯಿ ಮಗಳ ಜೊತೆ ಅಸಭ್ಯವಾಗಿ ವರ್ತಿಸಿ ಮಚ್ಚಿನಿಂದ ಹೊಡೆದು ಕೊಲೆ ಯತ್ನ ನಡೆಸಿದ ಘಟನೆ ಹುಣಸೂರು ತಾಲೂಕು ಗಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಘಟನೆ ಸಂಬಂಧ ಗಂಗೇನಹಳ್ಳಿಯ ಸೀನಾ, ಶಂಕರ, ಮಂಚಮ್ಮ, ಬೋರಮ್ಮ ಹಾಗೂ ದೇವರಾಜ್ ಎಂಬುವರ ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮದುವೆ ಮುಗಿದ ಒಂದು ತಿಂಗಳಲ್ಲಿ ಸಾಲ ಹಿಂದಿರುಗಿಸುವುದಾಗಿ ಸೀನಾ ಹೇಳಿದ್ದು, ಆದರೆ ಸಾಲ ಹಿಂದಿರುಗಿಸಲಿಲ್ಲ. ಆಗಾಗ ಸಾಲ ಕೊಟ್ಟ ರಾಧ ಮನೆಗೆ ಬಂದು ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದರು. ನಿನ್ನೆ ಸಹ ಮನೆ ಹತ್ತಿರ ಬಂದು ಹಣ ಕೇಳಿದಾಗ ಐವರು ಆರೋಪಿಗಳು ಅಸಭ್ಯವಾಗಿ ವರ್ತಿಸಿದ್ದಾರೆ.

ರಾಧಾರನ್ನ ಎಳೆದಾಡಿದ್ದಾರೆ. ಈ ವೇಳೆ ರಕ್ಷಣೆಗೆ ಬಂದ ಮಗಳು ಸಂಗೀತಾ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಸಂಗೀತಾಗೆ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ೫ ಆರೋಪಿಗಳ ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.