ಮನೆ ರಾಜ್ಯ “ಮನ್ ಕಿ ಬಾತ್”: ನಾಳೆ ಮೈಸೂರು ರೈಲು ನಿಲ್ದಾಣದಲ್ಲಿ ನೇರ ಪ್ರಸಾರ

“ಮನ್ ಕಿ ಬಾತ್”: ನಾಳೆ ಮೈಸೂರು ರೈಲು ನಿಲ್ದಾಣದಲ್ಲಿ ನೇರ ಪ್ರಸಾರ

0

ಮೈಸೂರು: ಮೈಸೂರು ವಿಭಾಗದಿಂದ ರೈಲ್ವೆ ನಿಲ್ದಾಣಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ “ಮನ್ ಕಿ ಬಾತ್” ಕಾರ್ಯಕ್ರಮದ ನೇರ ಪ್ರಸಾರವನ್ನು ಭಾನುವಾರ (ನವೆಂಬರ್ 26) ಬೆಳಿಗ್ಗೆ 11 ಗಂಟೆಗೆ ಮೈಸೂರು ರೈಲು ನಿಲ್ದಾಣದಲ್ಲಿ ಏರ್ಪಡಿಸಲಾಗಿದೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಡೆಸಿ ಕೊಡುವ ಪ್ರಸಿದ್ಧವಾದ “ಮನ್ ಕಿ ಬಾತ್” ಕಾರ್ಯಕ್ರಮದ ನೇರ ಪ್ರಸಾರವನ್ನು ವಿಭಾಗದ ವ್ಯಾಪ್ತಿಯ ವಿವಿಧ ರೈಲು ನಿಲ್ದಾಣಗಳಲ್ಲಿ ನಿರ್ಧಾರಿತ ಭಾನುವಾರದಂದು ನೇರ ಪ್ರಸಾರ ನಡೆಸಲಿದೆ ಎಂದು  ಘೋಷಿಸಲು ಹರ್ಷಿಸುತ್ತದೆ.

ಈ ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲಾ ರೈಲ್ವೆ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಮೈಸೂರು ರೈಲ್ವೆ ವಿಭಾಗವು ಆಹ್ವಾನ ನೀಡಿದೆ.

107 ನೇ ಆವೃತ್ತಿಯಲ್ಲಿ ನೇರ ಪ್ರಸಾರ ಲಭ್ಯವಾಗಲಿದೆ.