ಮನೆ ಅಪರಾಧ ಮೊಬೈಲ್ ಬಳಸುವ ವಿಚಾರಕ್ಕೆ ಗಲಾಟೆ: ತಂದೆಯಿಂದಲೇ ಮಗನ ಕೊಲೆ

ಮೊಬೈಲ್ ಬಳಸುವ ವಿಚಾರಕ್ಕೆ ಗಲಾಟೆ: ತಂದೆಯಿಂದಲೇ ಮಗನ ಕೊಲೆ

0

ಮೈಸೂರು: ಮೊಬೈಲ್ ಬಳಸುವ ವಿಚಾರದಲ್ಲಿ ತಂದೆ-ಮಗನ ನಡುವೆ ಜಗಳ ಆರಂಭವಾಗಿದ್ದು, ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ಮೈಸೂರಿನ ಬನ್ನಿಮಂಟಪದಲ್ಲಿ ನಡೆದಿದೆ.

ಮೊಬೈಲ್ ಬಳಸುವ ವಿಚಾರದಲ್ಲಿ ತಂದೆ ಮಗನ ನಡುವೆ ಗಲಾಟೆ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನಿಂದ ತಂದೆ ಅಸ್ಲಂಪಾಷ, ತನ್ನ ಮಗ ಉಮೇಜ್‌ ಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಉಮೇಜ್‌ ಮೃತಪಟ್ಟಿದ್ದಾನೆ.

ಪ್ರಕರಣ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಸ್ಲಂಪಾಷನನ್ನು ಬಂಧಿಸಿದ್ದಾರೆ.