ಮನೆ ಮನರಂಜನೆ ಕಾಟೇರ ಚಿತ್ರದ ಮೂರು ದಿನದ ಕಲೆಕ್ಷನ್!

ಕಾಟೇರ ಚಿತ್ರದ ಮೂರು ದಿನದ ಕಲೆಕ್ಷನ್!

0

ರುಣ್ ಸುಧೀರ್ ಮತ್ತು ನಟ ದರ್ಶನ್ ಕಾಂಬಿನೇಷನ್‌ನ ‘ಕಾಟೇರ’ ಕರ್ನಾಟಕದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಜ್ಯದಲ್ಲಿ ಎಲ್ಲಾ ಥಿಯೇಟರ್‌ಗಳಲ್ಲಿಯೂ ಬಹುತೇಕ ಹೌಸ್‌ಫುಲ್ ಬೋರ್ಡ್ ಕಾಣಿಸುತ್ತಿದೆ. ‘ಕಾಟೇರ’ ಡಿಸೆಂಬರ್ 29 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ, ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿರುವ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ತನ್ನ ಓಟ ಮುಂದುವರೆಸಿದೆ. ಸಿನಿಮಾ ಈ ವೀಕೆಂಡ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ.

ಶನಿವಾರ ಮತ್ತು ಭಾನುವಾರ ಎಲ್ಲಾ ಥಿಯೇಟರ್‌ಗಳು ಹೌಸ್‌ಫುಲ್ ಆಗಿದ್ದವು, ಸಿನಿಮಾ ಬಿಡುಗಡೆಯಾದ ಮೊದಲ ದಿನ ಕಾಟೇರ ಗಳಿಸಿದ್ದು 19.79 ಕೋಟಿ, ಎರಡನೇ ದಿನ 17.35 ಕೋಟಿ ಗಳಿಸಿತ್ತು. ಡಿಸೆಂಬರ್ 31 ಭಾನುವಾರ ಮೂರನೇ ದಿನ ಕಾಟೇರ 20.94 ಕೋಟಿ ರೂಪಾಯಿ ಗಳಿಸಿದೆ. ಎಲ್ಲವೂ ಸೇರಿ ಮೂರೇ ದಿನದಲ್ಲಿ 58.8 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

ಕಾಟೇರ ಚಿತ್ರದಲ್ಲಿ ದರ್ಶನ್ ‘ಕಾಟೇರ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಆರಾಧನಾ ರಾಮ್ ಶಾನುಭೋಗರ ಮಗಳು ಪ್ರಭಾವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು, ವಿನೋದ್ ಆಳ್ವಾ, ಕುಮಾರ್ ಗೋವಿಂದ್, ಶ್ರುತಿ, ಚೋಂಗ್ಲಾ ಆಗಿ ಬಿರಾದಾರ್ ಮತ್ತು ಪುಟ್ಟರಾಜು ಪಾತ್ರದಲ್ಲಿ ಮಾಸ್ಟರ್ ರೋಹಿತ್ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಕಾಟೇರ ಸಿನಿಮಾಗೆ ತರುಣ್ ಸುಧೀರ್ ಚಿತ್ರ ನಿರ್ದೇಶನ ಮಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಸುಧಾಕರ್ ಛಾಯಾಗ್ರಹಣ ಮತ್ತು ಎಸ್.ರಾಜ್, ಕೆ.ಎಂ.ಪ್ರಕಾಶ್ ಸಂಕಲನದ ಹೊಣೆ ಹೊತ್ತಿದ್ದಾರೆ.