ಮನೆ ಸುದ್ದಿ ಜಾಲ ಅಪಘಾತ: ಇಬ್ಬರ ಸಾವು; ಇಬ್ಬರ ಸ್ಥಿತಿ ಗಂಭೀರ

ಅಪಘಾತ: ಇಬ್ಬರ ಸಾವು; ಇಬ್ಬರ ಸ್ಥಿತಿ ಗಂಭೀರ

0

ಚಾಮರಾಜನಗರ (Chamarajanagar)- ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ನಂಜನಗೂಡು ಮೂಲದ 35 ವರ್ಷದ ಶಶಿಕುಮಾರ್ ಮತ್ತು 6 ವರ್ಷದ ದರ್ಶನ್ ಮೃತಪಟ್ಟವರು. ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿಗೇಟಿನ ಬಳಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಶಶಿಕುಮಾರ್ ಪತ್ನಿ ಚೈತ್ರಾ ಹಾಗೂ 5 ವರ್ಷದ ಗಗನ್ ತೀವ್ರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. 

ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.