ಮನೆ ಅಂತಾರಾಷ್ಟ್ರೀಯ ಅಮೆರಿಕಾ: ನಾಪತ್ತೆಯಾಗಿದ್ದ ಭಾರತ ಮೂಲದ ವಿದ್ಯಾರ್ಥಿಯ ಶವ ಪತ್ತೆ

ಅಮೆರಿಕಾ: ನಾಪತ್ತೆಯಾಗಿದ್ದ ಭಾರತ ಮೂಲದ ವಿದ್ಯಾರ್ಥಿಯ ಶವ ಪತ್ತೆ

0

ಅಮೆರಿಕಾ: ಅಮೆರಿಕದ ಓಹಿಯೋ ನಗರದಲ್ಲಿ ಭಾರತ ಮೂಲದ ವಿದ್ಯಾರ್ಥಿಯೊಬ್ಬರ ಶವ ಪತ್ತೆಯಾಗಿದೆ.

Join Our Whatsapp Group

ವಿದ್ಯಾರ್ಥಿ 2023ರಲ್ಲಿ ನಾಪತ್ತೆಯಾಗಿದ್ದರು, ಸಾವಿಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಕ್ಲೀವ್‌ ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿಗಾಗಿ 2023 ರಲ್ಲಿ ಯುಎಸ್‌ಗೆ ತೆರಳಿದ್ದ ಹೈದರಾಬಾದ್‌ ನ 25 ವರ್ಷದ ವಿದ್ಯಾರ್ಥಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

ಮೊಹಮ್ಮದ್ ಅಬ್ದುಲ್ ಅರ್ಫಾತ್ ಸುಮಾರು ಮೂರು ವಾರಗಳಿಂದ ನಾಪತ್ತೆಯಾಗಿದ್ದರು ಮತ್ತು ದೂತಾವಾಸವು ಅಬ್ದುಲ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ಅವರನ್ನು ಪತ್ತೆಹಚ್ಚಲು ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಈ ಹಿಂದೆ ತಿಳಿಸಿತ್ತು. ಇಂದು ಬೆಳಗ್ಗೆ ಅವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ಮಾರ್ಚ್​ 7 ರಂದು ಕುಟುಂಬದವರೊಂದಿಗೆ ಮಾತನಾಡಿದ್ದರು, ನಂತರ ಅವರ ಮೊಬೈಲ್ ಸ್ವಿಚ್ಡ್​ ಆಫ್​ ಆಗಿತ್ತು ಎಂದು ಅರ್ಫಾತ್ ತಂದೆ ತಿಳಿಸಿದ್ದಾರೆ. ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು ಬಳಿಕ ಮಗನನ್ನು ಅಪಹರಿಸಿದ್ದೇವೆ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದಾಗಿ ಹೇಳಿದ್ದಾರೆ.