ತೆಲುಗು ಚಿತ್ರರಂಗದ ಜನಪ್ರಿಯ ನಟ ನಂದಮೂರಿ ಕಲ್ಯಾಣ್ ರಾಮ್ ನಟಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದ್ದ ಸೆಟ್ ಗೆ ಬೆಂಕಿ ಬಿದ್ದಿದ್ದು ಸುಮಾರು ನಾಲ್ಕು ಕೋಟಿ ರೂಪಾಯಿ ನಷ್ಟವಾಗಿದೆ.
ಆದರೆ ಈ ಬೆಂಕಿ ಅವಘಡದಲ್ಲಿ ಯಾರಿಗೂ ಯಾವುದೇ ಗಾಯ ಅಥವಾ ಜೀವಹಾನಿ ಸಂಭವಿಸಿಲ್ಲ ಎಂದು ಚಿತ್ರತಂಡ ತಿಳಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು, ಸೆಟ್ ಗೆ ಬೆಂಕಿ ಬಿದ್ದಾಗ ಶೂಟಿಂಗ್ ನಡೆಯುತ್ತಿರಲಿಲ್ಲವಾದ್ದರಿಂದ ಯಾವುದೇ ಹಾನಿಯಾಗಿಲ್ಲ.
ನಂದಮೂರಿ ಕಲ್ಯಾಣ್ ರಾಮ್ ಅವರು ಕ್ರೈಂ ಥ್ರಿಲ್ಲರ್ ಕತೆಯುಳ್ಳ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಕಲ್ಯಾಣ್ ರಾಮ್ ಸಿಬಿಐ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಆಕ್ಷನ್ ದೃಶ್ಯಗಳ ಚಿತ್ರೀಕರಣ ಹಾಗೂ ಕೆಲವು ಕಚೇರಿ ದೃಶ್ಯಗಳ ಚಿತ್ರೀಕರಣವನ್ನು ಚಿತ್ರತಂಡ ಸೆಟ್ನಲ್ಲಿ ಮಾಡುತ್ತಿತ್ತು. ಇದಕ್ಕಾಗಿ ಹೈದರಾಬಾದ್ ಹೊರವಲಯದಲ್ಲಿ ಒಂದೇ ಜಾಗದಲ್ಲಿ ಬೇರೆ ಬೇರೆ ಸೆಟ್ಗಳನ್ನು ನಿರ್ಮಾಣ ಮಾಡಲಾಗಿತ್ತು. ಸೆಟ್ ನಿರ್ಮಾಣಕ್ಕೆ ಸುಮಾರು 4 ಕೋಟಿ ಖರ್ಚು ಮಾಡಲಾಗಿತ್ತು ಎನ್ನಲಾಗುತ್ತಿದೆ. ಈಗ ಆ ಬೃಹತ್ ಸೆಟ್ ಬೆಂಕಿಗೆ ಆಹುತಿಯಾಗಿದೆ. ಸೆಟ್ಗೆ ಬೆಂಕಿ ಬಿದ್ದಾಗ ಚಿತ್ರೀಕರಣ ನಡೆಯುತ್ತಿರಲಿಲ್ಲವಾದ್ದರಿಂದ ಯಾರಿಗೂ ಹಾನಿಯಾಗಿಲ್ಲ.
ಕಲ್ಯಾಣ್ ರಾಮ್ ನಟಿಸುತ್ತಿರುವ ಸಿನಿಮಾದಲ್ಲಿ ಹಿರಿಯ ನಟಿ, ರಾಜಕಾರಣಿ ವಿಜಯಶಾಂತಿ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್ನ ಅರ್ಜುನ್ ರಾಮ್ಪಾಲ್, ನಾಯಕಿಯಾಗಿ ಸಾಯಿ ಮಂಜ್ರೇಕರ್ ನಟಿಸಿದ್ದಾರೆ. ಈ ಸಿನಿಮಾವನ್ನು ಪ್ರದೀಪ್ ಚಿಲಕೂರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಅಶೋಕ್ ಬಂಡವಾಳ ಹೂಡಿದ್ದಾರೆ. ಕಲ್ಯಾಣ್ ರಾಮ್ ನಟನೆ ಜೊತೆಗೆ ಸಹ ನಿರ್ಮಾಪಕರೂ ಆಗಿದ್ದಾರೆ.
ಪಾರ್ವತಿ ದೇವಿ ಚಂದ್ರಘಂಟ ಹೇಗಾದರೂ ಗೊತ್ತ
ರಾಮನಗರದಲ್ಲಿ ಅತಿಥಿ ಬೋಧಕರ ಹುದ್ದೆಗಳು
ನವರಾತ್ರಿಯ ಎರಡನೇ ದಿನವಾದ ಇಂದು ತಾಯಿ ಬ್ರಹ್ಮಚಾರಿಣಿಯನ್ನ ಪೂಜಿಸಲಾಗುತ್ತೆ
ನಬಾರ್ಡ್ ಬ್ಯಾಂಕ್ ನಲ್ಲಿ ಆಫೀಸರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿ
ಹೆಚ್ಎಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ
ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲ…
ದಸರಾ ಸಮಯದಲ್ಲಿ ನೆನೆಯಬೇಕಾದ ಸಮಾಧಿಗಳು
70 ವರ್ಷ ಮೇಲ್ಪಟ್ಟ ಹಿರಿಯ ವಯಸ್ಕರಿಗೂ ಲಭಿಸುತ್ತದೆ ಆಯುಷ್ಮಾನ್ ಭಾರತ್ ಯೋಜನೆ
ಹೇ ಬಾಲ್ಯವೇ ನೀ ಮತ್ತೊಮ್ಮೆ ಮಾರುಕಳಿಸು…..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.