ಮನೆ ಮನರಂಜನೆ ‘ಗುಡ್ ಬ್ಯಾಡ್ ಅಗ್ಲಿ’: ತ್ರಿಬಲ್ ಪಾರ್ಟ್​ನಲ್ಲಿ ಬಂದ ಅಜಿತ್​

‘ಗುಡ್ ಬ್ಯಾಡ್ ಅಗ್ಲಿ’: ತ್ರಿಬಲ್ ಪಾರ್ಟ್​ನಲ್ಲಿ ಬಂದ ಅಜಿತ್​

0

ತಮಿಳು ನಟ ಅಜಿತ್ ಕುಮಾರ್ ಅವರು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಬಗ್ಗೆ ಇತ್ತೀಚೆಗೆ ಘೋಷಣೆ ಆಗಿತ್ತು. ಈಗ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ಅವರು ತ್ರಿಬಲ್ ರೋಲ್​​ನಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಇದು ಅಜಿತ್ ಅವರ 63ನೇ ಸಿನಿಮಾ ಆಗಿದ್ದು, ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾ 2025ರ ಸಂಕ್ರಾಂತಿ ಸಂದರ್ಭದಲ್ಲಿ ರಿಲೀಸ್ ಆಗಲಿದೆ.

Join Our Whatsapp Group

‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದ ಪೋಸ್ಟರ್ ಗಮನ ಸೆಳೆದಿದೆ. ಇದರಲ್ಲಿ ಮೂರು ಅಜಿತ್​ನ ತೋರಿಸಲಾಗಿದೆ.  ಮಧ್ಯದಲ್ಲಿರೋ ಅಜಿತ್ ಅವರು ಸಖತ್ ದಪ್ಪ ಕಾಣುತ್ತಿದ್ದಾರೆ. ಅವರ ಕೈಗೆ ಟ್ಯಾಟೂ ಇದೆ. ತುಂಬಾನೇ ಗಂಭೀರವಾಗಿಯೂ ಕಾಣಿಸುತ್ತಾರೆ. ಮತ್ತೊಂದರಲ್ಲಿ ಅವರು ಮಧ್ಯಬೆಟ್ಟು ತೋರಿಸುತ್ತಿದ್ದು, ಬ್ಲರ್ ಮಾಡಲಾಗಿದೆ. ಮತ್ತೊಂದರಲ್ಲಿ ಅಜಿತ್ ಅವರು ಹೊಡೆಯೋಕೆ ರೆಡಿ ಆಗಿದ್ದಾರೆ. ಟೈಟಲ್​ಗೆ ತಕ್ಕಂತೆ ಸಿನಿಮಾ ಮೂಡಿ ಬಂದಿದೆ.

ದೊಡ್ಡ ಬಜೆಟ್ ಸಿನಿಮಾಗಳನ್ನು ಸಂಕ್ರಾಂತಿ ಸಂದರ್ಭದಲ್ಲಿ ರಿಲೀಸ್ ಮಾಡೋಕೆ ಎಲ್ಲರೂ ಇಷ್ಟಪಡುತ್ತಾರೆ. ಅದೇ ರೀತಿ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರವನ್ನು ಪೊಂಗಲ್​ ಸಂದರ್ಭದಲ್ಲೇ ರಿಲೀಸ್ ಮಾಡಲಾಗುತ್ತಿದೆ. ಈ ಸಿನಿಮಾಗಳ ಜೊತೆ ಯಾವ ಯಾವ ಸಿನಿಮಾಗಳು ಸ್ಪರ್ಧೆಗೆ ಇಳಿಯಲಿವೆ ಎನ್ನುವ ಕುತೂಹಲ ಮೂಡಿದೆ.

ದೇವಿ ಶ್ರೀ ಪ್ರಸಾದ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಧಿಕ್ ರವಿಚಂದ್ರನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರಿಬ್ಬರ ಕಾಂಬಿನೇಷನ್​ನ ಮೊದಲ ಸಿನಿಮಾ.  ಸದ್ಯ ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿದೆ. ಶೀಘ್ರವೇ ಚಿತ್ರದ ಶೂಟಿಂಗ್ ನಡೆಯಲಿದೆ..