ಮನೆ ಅಪರಾಧ ಪತ್ನಿಗೆ ಕಿರುಕುಳ: ರಾಘವೇಂದ್ರ ಡಿ ಚನ್ನಣ್ಣನವರ್ ವಿರುದ್ಧ ಎಫ್​ಐಆರ್

ಪತ್ನಿಗೆ ಕಿರುಕುಳ: ರಾಘವೇಂದ್ರ ಡಿ ಚನ್ನಣ್ಣನವರ್ ವಿರುದ್ಧ ಎಫ್​ಐಆರ್

0

ಬೆಂಗಳೂರು(Bengaluru): ರಾಘವೇಂದ್ರ ಡಿ. ಚನ್ನಣ್ಣನವರ್ ವಿರುದ್ಧ ಪತ್ನಿಗೆ ಕಿರುಕುಳ ಆರೋಪ ಪ್ರಕರಣ ಕೇಳಿಬಂದಿದ್ದು, ನಗರದ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ರಾಘವೇಂದ್ರ 2015ರಲ್ಲಿ ರೋಜಾ ಎಂಬಾಕೆಯನ್ನು ಮದುವೆಯಾಗಿದ್ದರು.

ನನ್ನನ್ನು ಮದುವೆಯಾಗುವುದಕ್ಕೂ ಮುನ್ನ ಮತ್ತೊಬ್ಬ ಮಹಿಳೆಯನ್ನು ರಾಘವೇಂದ್ರ ಮದುವೆಯಾಗಿದ್ದಾರೆ. ಈ ವಿಚಾರ ಬಚ್ಚಿಟ್ಟು ನನ್ನನ್ನು ಮದುವೆಯಾದರು ರೋಜಾ ಆರೋಪಿಸಿದ್ದಾರೆ.

ಇದೇ ವೇಳೆ, ಹೊಂದಿಕೊಂಡು ಬಾಳುವಂತೆ ತಮಗೆ ಒತ್ತಾಯಿಸುತ್ತಿರುವುದಾಗಿಯೂ ಎಫ್ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಮದುವೆಯಾದ ಒಂದು ವರ್ಷದಲ್ಲೇ ನನ್ನನ್ನು ಬಿಟ್ಟು ಆ ಮಹಿಳೆ ಜೊತೆ ರಾಘವೇಂದ್ರ ಸಂಸಾರ ಶುರು ಮಾಡಿದ್ದಾರೆ. ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ, ನನಗೆ ನ್ಯಾಯ ಬೇಕು’ ಎಂದು ದೂರು ನೀಡಿದ್ದಾರೆ.