ಪಣಂಬೂರು: ಮಂಗಳೂರಿನ ಕೋಡಿಕಲ್ ವಾರ್ಡ್ ಸಂಖ್ಯೆ 16ರಲ್ಲಿ ಒಳಚರಂಡಿ ತೋಡಿಗೆ ರಿಕ್ಷಾ ಬಿದ್ದು ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಶುಕ್ರವಾರ ತಡರಾತ್ರಿ ಘಟನೆ ನಡೆದಿದೆ. ಕೊಟ್ಟಾರಚೌಕಿ ನಿವಾಸಿ ದೀಪಕ್ ಮೃತ ದುರ್ದೈವಿ.
ರಾತ್ರಿ ಮಳೆ ಬಂದ ಕಾರಣ ತೋಡಿನಲ್ಲಿ ನೀರು ಹರಿಯುತ್ತಿತ್ತು. ಈ ವೇಳೆ ರಿಕ್ಷಾ ತೋಡಿಗೆ ಬಿದ್ದಿದೆ. ಜನರು ನೋಡಿದಾಗ ನೀರೊಳಗೆ ರಿಕ್ಷಾ ಹೆಡ್ ಲೈಟ್ ಉರಿಯುತ್ತಿದ್ದುದನ್ನು ಕಂಡು ಅಗ್ನಿಶಾಮಕಕ್ಕೆ ಕರೆ ಮಾಡಿದ್ದಾರೆ. ತೋಡಿನ ಆಳದಲ್ಲಿ ರಿಕ್ಷಾ ಪತ್ತೆಯಾಗಿದ್ದು, ಚಾಲಕ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.