ಮನೆ ಅಪರಾಧ ಹುಣಸೂರು: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಲಾರಿ; ತಪ್ಪಿದ ಭಾರೀ ಅನಾಹುತ

ಹುಣಸೂರು: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಲಾರಿ; ತಪ್ಪಿದ ಭಾರೀ ಅನಾಹುತ

0

ಹುಣಸೂರು:ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಆಕ್ಸಲ್ ಕಟ್ ಆಗಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿದ ಘಟನೆ ಹುಣಸೂರು-ಮೈಸೂರು ಹೆದ್ದಾರಿಯ ಬಿಳಿಕೆರೆ ಜಂಕ್ಷನ್ ಬಳಿಯಲ್ಲಿ ಸೋಮವಾರ ನಡೆದಿದೆ.

Join Our Whatsapp Group

ಆಂಧ್ರದಿಂದ ಮಂಗಳೂರಿಗೆ ಟೈಲ್ ತುಂಬಿಕೊಂಡು ಬರುತ್ತಿದ್ದ 16 ಚಕ್ರದ ಗೂಡ್ಸ್ ಲಾರಿ ಬಿಳಿಕೆರೆ ಜಂಕ್ಷನ್‌ನ ಎಲೈಟ್ ಹೋಟೆಲ್ ಎದುರಿನ ಹೆದ್ದಾರಿಗೆ ಹಾಕಿರುವ ರಸ್ತೆ ಹಂಪ್ ವನ್ನು ಗಮನಿಸದೆ ವೇಗವಾಗಿ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿಯು ಕಿರು ಸೇತುವೆಗೆ ಡಿಕ್ಕಿ ಹೊಡೆದು, ಆಕ್ಸಲ್ ಕಟ್ ಆಗಿದೆಯಲ್ಲದೆ ಚಕ್ರಗಳು ಕಳಚಿ ಬಿದ್ದು ರಸ್ತೆ ಬದಿಯ ಹಳ್ಳಕ್ಕೆ ಉರುಳಿಬಿದ್ದಿದೆ.

ಆಕಸ್ಮಿಕವಾಗಿ ಘಟನೆ ನಡೆದಿದ್ದು, ಲಾರಿಯಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲವೆಂದು ಇನ್ಸ್ಪೆಕ್ಟರ್ ಲೋಲಾಕ್ಷಿ ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ವಾಹನ ದಟ್ಟಣೆ ಇಲ್ಲದ್ದರಿಂದ ಭಾರೀ ಅನಾಹುತ ತಪ್ಪಿದೆ.