ಮನೆ ಮನರಂಜನೆ ಭಾರತದ ಮೊದಲ ದಲಿತ ಕ್ರಿಕೆಟಿಗ ಪಾಲ್ವಂಕರ್ ಬಾಲೂ ಬಯೋಪಿಕ್ ​ನಲ್ಲಿ ಅಜಯ್ ದೇವಗನ್ ನಟನೆ

ಭಾರತದ ಮೊದಲ ದಲಿತ ಕ್ರಿಕೆಟಿಗ ಪಾಲ್ವಂಕರ್ ಬಾಲೂ ಬಯೋಪಿಕ್ ​ನಲ್ಲಿ ಅಜಯ್ ದೇವಗನ್ ನಟನೆ

0

ಅಜಯ್ ದೇವಗನ್ ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಸಾಕಷ್ಟು ಭಿನ್ನತೆ ತೋರುತ್ತಿದ್ದಾರೆ. ಇತ್ತೀಚೆಗೆ ಅವರು ‘ಮೈದಾನ್’ ಸಿನಿಮಾ ಮೂಲಕ ಗಮನ ಸೆಳೆದಿದೆ. ಭಾರತದ ಮೊದಲ ದಲಿತ ಕ್ರಿಕೆಟಿಗ ಪಾಲ್ವಂಕರ್ ಬಾಲೂ ಅವರ ಬಯೋಪಿಕ್​ನಲ್ಲಿ ಅಜಯ್ ದೇವಗನ್ ನಟಿಸಲಿದ್ದಾರೆ.

Join Our Whatsapp Group

ನಿರ್ಮಾಪಕಿ ಪ್ರೀತಿ ಸಿನ್ಹಾ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅನೌನ್ಸ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪಾಲ್ವಂಕರ್ ಬಾಲೂ ಪಾತ್ರದಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ತಿಗ್​ಮಂಶು ದುಲಿಯಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಾಮಚಂದ್ರ ಗುಹಾ ಬರೆದ ‘ಎ ಕಾರ್ನರ್ ಆಫ್ ಎ ಫಾರೆನ್ ಫೀಲ್ಡ್’ ಪುಸ್ತಕ ಆಧರಿಸಿ ಸಿನಿಮಾದ ಕಥೆ ಸಿದ್ಧವಾಗಿದೆ. ಈ ಚಿತ್ರದ ಶೂಟಿಂಗ್ ಈ ವರ್ಷದ ಕೊನೆಯಲ್ಲಿ ಆರಂಭ ಆಗೋ ಸಾಧ್ಯತೆ ಇದೆ.

ಪಾಲ್ವಂಕರ್ ಬಾಲೂ ಅವರು ದಲಿತ ಸಮುದಾಯದಲ್ಲಿ ಜನಿಸಿದರು. ಅವರು ಪುಣೆ ಕ್ರಿಕೆಟ್ ಕ್ಲಬ್​ನಲ್ಲಿ ಆರಂಭದಲ್ಲಿ ಗ್ರೌಂಡ್ ಕೀಪರ್ ಆಗಿದ್ದರು. ನಂತರ ಅವರು ಕ್ರಿಕೆಟರ್ ಆದರು. ಈ ಪ್ರಯಾಣದಲ್ಲಿ ಅವರು ಎಷ್ಟೊಂದು ಚಾಲೆಂಜ್​ಗಳನ್ನು ಎದುರಿಸಿದರು ಎನ್ನುವುದನ್ನು ಉಲ್ಲೇಖಿಸಲಾಗಿದೆ.