ರಾಜು : ಅಪ್ಪಾ ಒಂದು ವಿಷಯ ಗೊತ್ತಾ?
ಅಪ್ಪ : ವಿಷಯ ಏನು?
ರಾಜು : ನನ್ನ ತಮ್ಮ ರಾಮು ಇವತ್ತು ಜಿರಲೆ ತಿಂದುಬಿಟ್ಟಾ.
ಅಪ್ಪ : ಬೇಗ ಹೋಗಿ ಡಾಕ್ಟರನ್ನು ಕರ್ಕೊಂಡು ಬಾ.
ರಾಜು : ಅದಕ್ಕೆ ಡಾಕ್ಟೃೇನು ಬೇಡ
ಅಪ್ಪ : ಡಾಕ್ಟರ್ ಏಕೋ ಬೇಡ?
ರಾಜು : ಜಿರಲೆ ಸಾಯೋಕೆ ನಾನಾಗ್ಲೆ ಅವನಿಗೆ ಪಾಲಿಡಾಲ್ ಕೊಡಿಸಿದೀನಿ ಗೊತ್ತಾ?
ಕಿಟ್ಟು : ಒಂದು ಹುಡುಗ ಹುಡುಗಿ ಪ್ರೇಮಿಸುತ್ತಾ ಇದ್ರು.
ರಾಜು : ಸರಿ ಮುಂದೇನಿಯ್ತು ಅನ್ನೋದನ್ನ ಹೇಳು?
ಕಿಟ್ಟು : ಇರೂ ಮದುವೆ ಆಗ್ಬೇಕೂ ಅಂತ ಇದ್ರು. ಅಷ್ಟ್ರಲ್ಲಿ ಅವರಿಗೆ ಅವಳಿ ಜವಳಿ ಮಗುವಾಯ್ತು. ಆ ಮಕ್ಕಳಿಗೆ ಏನು Confirmed ಅಂತ?
ರಾಜು : ವೆರಿ ಸಿಂಪಲ್, ಅಪ್ಪಿ—ತಪ್ಪಿ ಅಂತ ಇಟ್ರಾಯ್ತು.
***
ಟೀಚರ್ : ನೋಡಿ ಕಲೆ ಅನ್ನೋದು ನಮ್ಮ ಮೈಮನಗಳನ್ನು ಸಂತೋಷಪಡಿಸುವ ಒಂದು ವಿದ್ಯೆ ರಾಜು, ನಿಂಗೆ ಯಾವ ಕಲೆ ಇಷ್ಟ ಏಕೆ ಇಷ್ಟಾ?
ರಾಜು : ನನಗೆ ನಮ್ಮ ಎದುರಿಗಿರುವ ಚಂದ್ರಕಲಾ ಇಷ್ಟ ಹಾಗೆ ನಮ್ಮನೆ ಹಿಂದಿರುವ ರೂಪಕಲಾ ಇಷ್ಟ. ಏಕೆಂದರೆ ಅವರು ನನ್ನ ಮುಖ ನೋಡಿ ನಕ್ಕು ನನಗೂ ಸಂತೋಷ ಕೊಡ್ತಾ ಇರ್ತಾರೆ.