ಜಗದೋದ್ಧಾರನ ಆಡಿಸಿದಳು ಯಶೋದೆ ||
ಜಗದೋದ್ಧಾರನ |
ಜಗದೋದ್ಧಾರನ ಮಗನೆಂದು ತಿಳಿಯುತ ||
ಸುಗುಣಾಥರಂಗನ ಆಡಿಸಿದಳು ಯಶೋದೆ
||ಜಗದ್ದುದ್ದಾರನ||
ನಿಮಗೇಕೆ ಸಿಲುಕದ ಅಗಣಿತ ಮಹಿಮನ ||
ಮಗುಗಳ ಮಾಣಿಕ್ಯ ಆಡಿಸಿದಳು ಯಶೋದೆ
||ಜಗದ್ಗುದ್ವಾರನ||
ಅಣೋರಣೀಯನ ಮಹೋತೋ ಮಹಿಮನ||
ಪ್ರಮೇಯನ ಆಡಿಸಿದರು ಯಶೋಧೆ
||ಜಗದೋದ್ಧಾರನ||
ಪರಮ ಪುರುಷನ ಪರ ವಾಸುದೇವ ||
ಪುರಂದರ ವಿಠಲ ಆಡಿಸಿದಳು ಯಶೋಧೆ
|| ಜಗದೋದ್ಧಾರ||