ಮನೆ ದೇವರನಾಮ ನೋಡಿರಲ್ಲಿ ಆಗಿದೆ :-

ನೋಡಿರಲ್ಲಿ ಆಗಿದೆ :-

0

ನೋಡಿರಿಲ್ಲಿ ಆಗಿದೆ ಧರ್ಮಸಂಗಮ
ಬಾಹುಬಲಿ ಬಂದುದೆ ಇದರ ಮರ್ಮ ||
ಧರ್ಮಸ್ಥಳ ಎಂಬುದೇ ಪುಣ್ಯ ನಾಮ ||
ನೋಡುತಿಹರು ಮಂಜುನಾಥ ಪೂರ್ಣ ಪ್ರೇಮ || ನೋಡಿರಲ್ಲಿ ||

ಮಂಜುನಾಥ ತಂದ ಭುವಿಗೆ ಕೈಲಾಸ
ಭಕ್ತಿಗಂಗೆ ನೇತ್ರೆಯಲ್ಲಿ ಅವಾಸಾ ||
ಕಿವಿ ಕಿವಿಗೆ ಎಲ್ಲೆಡೆ ವೇದಘೋಷ ||
ಅವರರಂತೆ ಮನುಜರ ಸಂತೋಷ || ನೋಡಿರಿಲ್ಲಿ ||

ಭೂತನಾಥ ಅಣ್ಣಪ್ಪ ರಕ್ಷೆ ನೀಡಲು
ಭೂತಪೇತ್ರ ನಿಲ್ಲದೆ ಓಡಿ ಹೋಗಲು ||
ಭಕ್ತಿಗಾಗಿ ಸರ್ಗವೇ ಇಲ್ಲಿ ಮೀಸಲು||
ದೇವಲೋಕ ಸುಧೆರ ಧರೆ ಯಾವಾಗಲೂ || ನೋಡಿರಲ್ಲಿ ||