ಸ್ಕೂಲಿನಲ್ಲಿ ಮೇಷ್ಟ್ರು ವಿರುದ್ಧಾರ್ಥಕ ಪದಗಳನ್ನು ಕಲಿಸುತ್ತಿದ್ದರು ಸುಖ-ದುಃಖ ಶಾಂತಿ ಅಶಾಂತಿ ಹೊಗಳಿಕೆ ತೆಗಳಿಕೆ ಹೀಗೆ. ಒಂದು ಉದಾಹರಣೆ ಕೊಡು ಎಂದು ತಿಮ್ಮನಿಗೆ ಮೇಷ್ಟ್ರು ಕೇಳಿದರು. ತಿಮ್ಮ ಎದೆ ಸೆಟೆಸಿ ಹೇಳಿದ, ಪತಿ-ಪತ್ನಿ ಎಂದು !
ರಾಜಾ ಮುಗಿದು ಸ್ಕೂಲು ಹೊಸದಾಗಿ ಶುರುವಾಗಿತ್ತು, ಸ್ಕೂಲಿಗೆ ಸುಣ್ಣ ಬಣ್ಣ ಮಾಡಿಸಿದ್ದರು. ಗುರುಗಳು ಹುಡುಗರನ್ನು ಸ್ಕೂಲು ಹೇಗೆ ಕಾಣುತ್ತಿದೆ ಎಂದು ಕೇಳಿದರು.ಎಲ್ಲರೂ ಚೆನ್ನಾಗಿ ಕಾಣುತ್ತಿದೆ ಎಂದರು. ಹಿಂದೆ ಕುಳಿತ ಕಿಲಾಡಿ ಕಿಟ್ಟಿ ಹೇಳಿದ, ಬೀಗ ಹಾಕಿದಾಗ ಇದಕ್ಕಿಂತ ಚೆನ್ನಾಗಿ ಕಾಣುತ್ತಿತ್ತು ಸರ್ ಎಂದು!
ಮಗ ಆಫೀಸಿನಿಂದ ಬಂದವನೇ ತಂದೆಯನ್ನು ಕೇಳಿದ ಅಪ್ಪ ಲಗ್ನಕ್ಕೆ ಎಷ್ಟು ಖರ್ಚಾಗುತ್ತದೆ ಎಂದು. ಅಪ್ಪ ಹೇಳಿದ ಗೊತ್ತಿಲ್ಲ ಮಗನೇ,ನಾನಿನ್ನು ಖರ್ಚ್ದ ಮಾಡುತ್ತಲೇ ಇದ್ದೇನೆ ಎಂದು.