ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಇಬ್ಬರು ಸ್ನೇಹಿತರಿದ್ದರು. ಒಬ್ಬ ಕೇಳಿದ, ನೀನು ಕೇಬಲ್ ಕಲೆಕ್ಷನ್ ಏಕೆ ತೆಗೆದುಕೊಂಡಿಲ್ಲ ಎಂದು. ಅವನ ಸ್ನೇಹಿತ ಹೇಳಿದ, ಮಕ್ಕಳು ಓದದೆ ಟಿವಿ ನೋಡಿ ಹಾಳಾಗಿ ಹೋಗುತ್ತಾರೆ. ಅದಕ್ಕೆ ತೆಗೆದುಕೊಂಡಿಲ್ಲ ಎಂದ. ಹಾಗಾದ್ರೆ ಮಕ್ಕಳೆಲ್ಲಿ ಕಾಣುತ್ತಿಲ್ಲ, ಓದುತ್ತಿದ್ದಾರೆಯೇ ಎಂದು ಕೇಳಿದಕ್ಕೆ, ಇಲ್ಲ, ಅವರೆಲ್ಲಾ ಪಕ್ಕದ ಮನೆಗೆ ಟಿವಿ ನೋಡಲು ಹೋಗಿದ್ದಾರೆ ಎಂದು!

Join Our Whatsapp Group

ಒಬ್ಬ ತನ್ನ ಸ್ನೇಹಿತನಿಗೆ ಹೇಳುತ್ತಾನೆ ಸುಖ ದುಃಖ ಎನ್ನುವುದು ಮನುಷ್ಯನಿಗೆ ಬರುತ್ತಲೇ ಇರುತ್ತವೆ. ದುಃಖ ನಮ್ಮ ಜೊತೆ ಯಾವಾಗಲೂ ಇರುತ್ತದೆ. ಮದುವೆಯಾದ ಹೆಂಡತಿಯಂತೆ.ಸುಖ ಯಾವಾಗಲೂ ಬಂದು ಹೋಗುತ್ತದೆ, ಹೆಂಡತಿಯ ತಂಗಿಯಂತೆ!

ಹೆಂಡತಿ ನನ್ನ ಮಗು ನಾಲ್ಕಾಣೆಯನ್ನು ನುಂಗಿದೆ ಡಾಕ್ಟರರನ್ನು ಕರೆಯಿರಿ.
ಗಂಡ ಹೋಗಲಿ ಬಿಡೆ, ಈಗ ನಾಲ್ಕಾಣಿಗೆ ಏನು ಸಿಗುತ್ತದೆ?