ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಬಸ್ಸಿನ ಚಾಲಕನ ಬಳಿ ಹೋಗಿ ಒಬ್ಬ ಪ್ರಯಾಣಿಕ ವಿಚಾರಿಸಿದ. ‘ನಾನೀಗ ಚಹಾ ಪಾನಕ್ಕಾಗಿ 10 ನಿಮಿಷ ಹೋದರೆ ಈ ಬಸ್ಸು ಹೊರಟು ಹೋಗಬಹುದೇ?’

ಚಾಲಕ ಉತ್ತರಿಸಿದ ‘ನನ್ನನ್ನೂ ನಿಮ್ಮ ಜೊತೆ ಕರೆದೊಯ್ದರೆ ನಿಶ್ಚಿತವಾಗಿಯೂ ಬಸ್ಸು ಹೊರಟುಹೋಗುವುದಿಲ್ಲ.’

Join Our Whatsapp Group

ನ್ಯಾಯಾಧೀಶ : ನೀನು ಮನೆಯೊಳಗೆ ಜನರಿರುತ್ತಾ ಅಷ್ಟೊಂದು ವಸ್ತುಗಳನ್ನು ಹೇಗೆ ಕಳವು ಮಾಡಿದೆ?
ಕಳ್ಳ : ನಾನು ನಿಮಗೆ ಏಕೆ ಹೇಳಬೇಕು? ನನ್ನ ದಂಧೆಯ ಗುಟ್ಟನ್ನು ನಾನು ಬಿಟ್ಟು ಕೊಡುವವನಲ್ಲ.

ಒಬ್ಬ ನವನಾಗರಿಕ ಯುವತಿ ಸುಂದರನಾದ ವ್ಯಕ್ತಿಯೊಬ್ಬನ ಜೊತೆ ಸ್ನೇಹ ಸಂಪಾದಿಸಿ ಅವನನ್ನೇ ಮದುವೆಯಾಗಲು ಬಯಸಿದಳು.
ಅವ ಹೇಳಿದ : ಮನೆಯವರು ನಮ್ಮ ಮದುವೆಗೆ ಒಪ್ಪುವುದೇ ಇಲ್ಲ
ಅವಳು : ಯಾರು?
ಅವ : ನನ್ನ ಹೆಂಡತಿ,ಮಕ್ಕಳು.