ಮನೆ ದೇವರ ನಾಮ ಕನ್ನಡ ನಾಡಿನ ಈ ನೆಲ

ಕನ್ನಡ ನಾಡಿನ ಈ ನೆಲ

0

ಕನ್ನಡ ನಾಡಿನ ಈ ನೆಲ
ಈಶನ ಪೂಜೆಯ ಪ್ರತಿಫಲ ||
ನೇತ್ರಾವತಿಯ ಪುಣ್ಯ ಜಲ |
ನೀಡುವ ಕ್ಷೇತ್ರ ಧರ್ಮಸ್ಥಳ || ಕನ್ನಡ ನಾಡಿನ ||

ಮಂಜುನಾಥನು ಮನೆ ಮಾಡಿರುವ
ಕ್ಷೇತ್ರದ ರಾಜನ ದರ್ಶನ ||
ಹೊಂದಿದ ಕೂಡಲೇ ಜನ್ಮ ಕೋಟಿಯ ||
ಪಾಪ ರಾಶಿಯು ನಾಶನ ||ಕನ್ನಡ ನಾಡಿನ ||

ನೇತ್ರಾವತಿಯಲ್ಲಿ ಶಿವ ನಾಮ ವನು
ನೆನೆಯುತ ಮಾಡಿದ ಸ್ಥಾನ ||
ದೇವಗಂಗೆಯಿರಿ ನೀಯನ್ನು ಪಡೆಯುವ ||
ಪುಣ್ಯಕೋಟಿ ಸಮಾನ || ಕನ್ನಡ ನಾಡಿನ ||

ಧರ್ಮ ನೆಲೆಸಿಹ ಕರ್ಮ ಕಳೆಯುವ
ಧರ್ಮಸ್ಥಳವಿದೆ ಪಾವನ ||
ಮರ್ಮವರಿತವನ್ನು ಸರ್ವ ಧರ್ಮಗಳ ||
ಸಾರ ಕಾಣುವ ತಾಣ || ಕನ್ನಡ ನಾಡಿನ ||