ಒಬ್ಬ ಕುಡುಕ ಇನ್ನೊಬ್ಬ ಕುಡುಕನನ್ನು ಕೇಳಿದ “ಅಲ್ಲೊ ಗೆಳೆಯ,ಈ ಮಟಮಟ ಮಧ್ಯಾಹ್ನದಲ್ಲಿ ಚಂದ್ರ ಇಷ್ಟೊಂದು ಕೆಂಡ ಕಾರುತ್ತಿದ್ದಾನೆ? “ಇನ್ನೊಬ್ಬ ಬಹುಶಃ ರಾತ್ರಿ ಹೆಂಡತಿ ಕೂಡ ಜಗಳಾಡಿರಬೇಕು. ಅದಕ್ಕೆ ಸಿಟ್ಟಾಗಿ ಉರಿಯುತ್ತಿದ್ದಾನೆ!”
‘ಯಾಕೋ ಗುಂಡ ನಿನ್ನನ್ನು ಜೈಲಿಗೆ ಹಾಕುತ್ತಿದ್ದಾರಂತೆ? ಏನು ಮಾಡ್ತಿದ್ದೆ?
‘ಏನಿಲ್ಲ, ಚಿತ್ರ ತೆಗೆದೆ.’
ಏನು ಚಿತ್ರ ತೆಗೆದದ್ದಕ್ಕೆ ಜೈಲಿಗೆ ಹಾಕ್ತಾರೆಯೇ? ’
ಹೌದು ಬೇರೆಯವರ ಮನೆಯ ಗೋಡೆಯಲ್ಲಿ ಹಾಕಿದ್ದ ಚಿತ್ರ ತೆಗೆದೆ.
ಆ ದಿನ ಸುಲಭ ಶೌಚಾಲಯದ ಉದ್ಘಾಟನೆ ಇತ್ತು. ದೊಡ್ಡ ರಾಜಕಾರಣಿ ಬಂದಿದ್ದರು. ಅವರಿಗೆ ಕೆಲಸಗಾರ ಕಿವಿಯಲ್ಲಿ ಹೇಳಿದ “ಬರೀ ರಿಬ್ಬನ್ ಕತ್ತರಿಸಿದರಾಯಿತು. ಉದ್ಘಾಟನೆ ಎಂದು ಒಳಗೆ ಹೋಗಿ ಏನು ಮಾಡಬೇಡಿ ”ಎಂದು!














