ಮನೆ ರಾಷ್ಟ್ರೀಯ ವಿನಯ್‌ ಕುಮಾರ್‌ ಸಕ್ಸೇನಾ ದೆಹಲಿಯ ನೂತನ ಲೆಫ್ಟಿನೆಂಟ್‌ ಗವರ್ನರ್‌

ವಿನಯ್‌ ಕುಮಾರ್‌ ಸಕ್ಸೇನಾ ದೆಹಲಿಯ ನೂತನ ಲೆಫ್ಟಿನೆಂಟ್‌ ಗವರ್ನರ್‌

0

ನವದೆಹಲಿ (New Delhi)- ದೆಹಲಿಯ ನೂತನ ಲೆಫ್ಟಿನೆಂಟ್‌ ಗವರ್ನರ್‌ ಆಗಿ ವಿನಯ್‌ ಕುಮಾರ್‌ ಸಕ್ಸೇನಾ (Vinay Kumar Saxena) ಅವರನ್ನು ನೇಮಕ ಮಾಡಲಾಗಿದೆ.

ದೆಹಲಿಯ ರಾಷ್ಟ್ರ ರಾಜಧಾನಿ ವಲಯದ ಲೆಫ್ಟಿನೆಂಟ್‌ ಗವರ್ನರ್‌ ಆಗಿ ವಿನಯ್‌ ಕುಮಾರ್‌ ಸಕ್ಸೇನಾ ಅವರನ್ನು ಭಾರತದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ನೇಮಕ ಮಾಡಿರುವ ಬಗ್ಗೆ ರಾಷ್ಟ್ರಪತಿ ಭವನದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿನಯ್‌ ಕುಮಾರ್‌ ಅವರು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷರಾಗಿದ್ದಾರೆ.

ಅನಿಲ್‌ ಬೈಜಲ್‌ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ. 2016ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಲೆಫ್ಟಿನಂಟ್‌ ಗವರ್ನರ್‌ ಆಗಿ ಐಎಎಸ್‌ ನಿವೃತ್ತಿ ಅಧಿಕಾರಿ ಅನಿಲ್‌ ಬೈಜಲ್‌ ಅವರನ್ನು ನೇಮಕ ಮಾಡಲಾಗಿತ್ತು.