ಮನೆ ದೇವರನಾಮ ಹಕ್ಕಿಗಳು ಪಕ್ಕಗಳ ಗರಿಗೆದರಿ

ಹಕ್ಕಿಗಳು ಪಕ್ಕಗಳ ಗರಿಗೆದರಿ

0

ಹಕ್ಕಿಗಳು ಪಕ್ಕಗಳ ಗರಿಗೆದರಿ ಹಾರಿ
ಚಿಟ್ಟೆಗಳು ಸರಿ ಸರಿದು ತೆರೆ ಮರೆಯ ಸೇರಿ
ಹೊಬ್ಬಣ್ಣ ರವಿಕಿರಣ ಚೆದುರಿದೆ ಮೇಲೇರಿ
ದೋಂಟದ ಸದ್ಗುರುವೇ ಹೇಳು, ದಯೆ ತೋರಿ ||

ಸಿದ್ದಲಿಂಗೇಶ್ವರನೇ ಏಳಯ್ಯ ಹೇಳು |
ಕೋಗಿಲೆಯ ಇಂಚರವ ಕೇಳಯ್ಯ ಕೇಳು |
ನಿರ್ವಿಕಲ್ಪ ಗುಹೆಯಲಿಹ ದೋಂಟದ ಶಿವಯೋಗಿ ||
ಶರಣಗಣ ಕಾಯುವುದು ಗುರು ಸೇವೆಗಾಗಿ |
ದೋಂಟದ ಸದ್ಗುರುವೇ ಹೇಳು ದಯೆ ತೋರಿ || ಹಕ್ಕಿಗಳು ||

ಜ್ಞಾನಿಗೋಸಲ ಚನ್ನಬಸವರ ಶಿಷ್ಯರೆನಿಸಿಹ |
ಪರಮ ಸಿದ್ದಯ್ಯ ಪಡೆದು ನೆಡೆದಿಹ ಯೋಗಿ ಯತಿವರ |
ಕರದಲ್ಲಿಗೆ ಬರುತಿರುವ ಕರೆದವರ ತಾವ |
ಆಸ್ತಿಕರಿಗೆ ಆಸಕ್ತಿಯ ಆಶಕ್ತಿಯ ನಿವಾ |
ಸಿದ್ದಲಿಂಗೇಶ್ವರಾನೇ ಏಳು ತವ ಸುಪ್ರಭಾತ ತವ ಸುಪ್ರಭಾತ
ಯಾವ ಸುಪ್ರಭಾತ |
ತವ ಸುಪ್ರಭಾತ ತವ ಸುಪ್ರಭಾತ ತವ ಸುಪ್ರಭಾತ || ಹಕ್ಕಿಗಳು ||