ಮನೆ ಯೋಗಾಸನ ಪರಿವೃತೈಕಪಾದ ಶೀರ್ಷಾಸನ

ಪರಿವೃತೈಕಪಾದ ಶೀರ್ಷಾಸನ

0

 ‘ಪರಿವೃತ್ತ’ವೆಂದರೆ  ಗುಂಡಗೆ ತಿರುಗಿಸಿಡುವುದು; ‘ಏಕಪಾದ’ = ಒಂದು ಕಾಲು. ಈ ‘ಶೀರ್ಷಾಸನ’ದ ವ್ಯತ್ಯಾಸ ಭಂಗಿಯಲ್ಲಿ ಕಾಲುಗಳನ್ನು ದೂರವಾಗಿ ಅಗಲಿಸಿಟ್ಟು ಬಳಿಕ ಮುಂಡವನ್ನು ಮತ್ತು ಕಾಲುಗಳನ್ನೂ ಎರಡೂ ಪಕ್ಕಗಳಿಗೆ ತಿರಗಿಸಿರಬೇಕು.ಆಗ ತಲೆಯ ಮತ್ತು ಕೈಗಳ ಸ್ಥಾನಗಳನ್ನು ಸ್ವಲ್ಪವೂ ಬದಲಿಸದೆಯೆ ದೇಹವನ್ನು ಸಮತೋಲನದಲ್ಲಿರಿಸಬೇಕು.

ಅಭ್ಯಾಸ ಕ್ರಮ

1. ಮೊದಲು  ಪಾರ್ಶ್ವ  ಶೀರ್ಷಾಸನದ ಭಂಗಿಯಲ್ಲಿ ಮಾಡಿ ಮುಗಿಸಿದ ಮೇಲೆ, ಕಾಲುಗಳನ್ನು ಆದಷ್ಟು ಅಗಲಿಸಿ, ಬಳಿಕ ಬಲಗಾಲನ್ನು ಮುಂಚಾಚಿ ಎಡಗಾಲನ್ನು  ಸಮದೂರಕ್ಕೆ ಹಿಂಚಾಚಬೇಕು. ಅನಂತರ ಉಸಿರನ್ನು ಹೊರಬಿಟ್ಟು ಕಾಲುಗಳನ್ನು ಎಡಗಡೆಯಿಂದ ಬಲಗಡೆಗೆ ಅಂದರೆ ಗಡಿಯಾರದ ಮುಳ್ಳುಗಳು ಚಲಿಸುವ ರೀತಿಯಲ್ಲಿ  ತಿರುಗಿಸುವುದರ ಮೂಲಕ, ಬೆನ್ನೆಲುಬುನ್ನು ಎಡಪಕ್ಕಕ್ಕೆ ಸುಮಾರು 90 ಡಿಗ್ರಿಗಳಷ್ಟು ತಿರುಗಿಸಬೇಕು.

2. ಹೀಗೆ ಪಕ್ಕಕ್ಕೆ ತಿರುಗಿಸಿದ ಮೇಲೆ,ಜಾನುರಜ್ಜುವಿನ ಮಾಂಸ ಖಂಡಗಳು,  ಮಂಡಿಗಳು ಮತ್ತು ಮೀನ ಖಂಡಗಳನ್ನು ಬಿಗಿಗೊಳಿಸುವುದರ ಮೂಲಕ ಕಾಲುಗಳನ್ನು ಕಬ್ಬಿಣದ ಸಲಾಕೆಯಂತೆ ಗಟ್ಟಿಮಾಡಿ ನೇರವಾಗಿ  ನಿಲ್ಲಿಸಬೇಕು.

3. ಆ ಬಳಿಕ ಕಾಲುಗಳನ್ನು ಮತ್ತಷ್ಟು ಅಗಲಿಸಿ ಆ ಭಂಗಿಯಲ್ಲಿ 20 – 30 ಸೆಕೆಂಡುಗಳಕಾಲ ಸಾಮಾನ್ಯ ಉಸಿರಾಟದಿಂದ ನೆಲೆಸಬೇಕು..

4. ಉಸಿರನ್ನು ಹೊರದೂಡಿ,, ನೇರವಾದ ಸಲಾಂಬ ಶೀರ್ಷಾಸನ  ಒಂದಾದ  ಭಂಗಿಗೆ ಮತ್ತೆ ಬರಬೇಕು.ಈಗ ಎಡಗಾಲನ್ನು  ಮುಂಗಡೆಗೂ, ಬಲಗಾಲನ್ನು ಹಿಂದೆಗಡೆಗೂ ಸರಿಸಿ,ಕಾಲುಗಳನ್ನು ಅಪ್ರದಕ್ಷಿಣವಾಗಿ ಅಂದರೆ ಬಲದಿಂದ ಎಡಗಡೆಗೆ ತಿರುಗಿಸುವುದರ ಮೂಲಕ ಬೆನ್ನುಮೂಳೆಯನ್ನು ಬಲಪಕಕ್ಕೆಗ 90 ಡಿಗ್ರಿಗಳಷ್ಟು ತಿರುಗಿಸಬೇಕು.ಈ ಭಂಗಿಯಲ್ಲಿಯೂ ಹಿಂದಿನಂತೆಯೇ ಅಷ್ಟೇ ಕಾಲ ನೆಲೆಸಬೇಕು ಇದಾದಮೇಲೆ ಉಸಿರನ್ನು ಹೊರಕ್ಕೆಬಿಟ್ಟು ಸಾಲಂಬ ಒಂದರ ಭಂಗಿಗೆ ಹಿಂದಿರುಗಬೇಕು.

ಪರಿಣಾಮಗಳು

ಈ ಆಸನವು ಕಾಲುಗಳಲ್ಲಿಯ ಮಾಂಸಖಝಡಗಳನ್ನು ಬೆಳೆಸಲು ಸಹಕಾರಿಯಾಗಿದೆ; ಮೂತ್ರಪಿಂಡಗಳು, ಮೂತ್ರಕೋಶ,ಮೂತ್ರಕೋಶದ ಕಂಠವನ್ನಾವರಿಸಿದ ಗ್ರಂಥಿ ಮತ್ತು ಕರುಳುಗಳಿಗೆ ಹುರುಪುಕೊಟ್ಟು ಅವುಗಳನ್ನು ಕಾರ್ಯನಿರ್ವಹಣೆಯಲ್ಲಿ ನೆರವಾಗುತ್ತವೆ.