ಅವನು: ನನ್ನ ಆರೋಗ್ಯದ ಬಗ್ಗೆ ನಿಗಾ ಇಡೋವರು ಒಬ್ಬರಾದರು ಜಗತ್ತಿನಲ್ಲಿದ್ದಾರೆ?
ಇವನು : ಯಾರು ನಿನ್ನ ಹೆಂಡ್ತೀನಾ?
ಅವನು : ಇಲ್ಲ ನನ್ನ ಡಾಕ್ಟರು
“ಛೆ ತುಂಬಾ ಅನ್ಯಾಯ ಕೊಳಕು ಮಕ್ಕಳು ಬೀದೀಲ್ಲಿ ಆಡ್ತಿದ್ದಾರೆ” “ಹೌದು ನೀನೇ ನನ್ನ ಸ್ವಂತ ಮಗನನ್ನು ಕಂಡುಹಿಡಯೋಕ್ಕೆ ಮೊದಲು ಎಂಟು ಹುಡುಗರನ್ನು ಕ್ಲೀನ್ ಮಾಡಬೇಕಾಗಿತು”
ತಾಯಿ ಹಾಡು ಹೇಳುತ್ತಾ ಮಗಳನ್ನು ಮಲಗಿಸುತ್ತಿದ್ದಳು. ಅಲ್ಲಿಗೆ ಬಂದ ಗಂಡನನ್ನು ನೋಡಿ,ನಾನು ಹಾಡು ಹೇಳಿ ಎಷ್ಟು ಬೇಗ ಮಗಳನ್ನು ಮಲಗಿಸಿದೆ ಎಂದು ಜಬದಿಂದ ಹೇಳಿದಳು. ಗಂಡ, ನಿನ್ನ ಹಾಡು ಕೇಳಿ ಅವಳು ಮಲಗಲಿಲ್ಲ.ಮಲಗದಿದ್ದರೆ ಆ ಹಾಡು ಇನ್ನೂ ಎಷ್ಟು ಹೊತ್ತು ಕೇಳಬೇಕಾಗುತ್ತದೋ ಎಂದು ಹೆದರಿ ಮಲಗಿದ್ದಾಳೆ ಎಂದುತ್ತರಿಸಿದ !














