ಉಡುಪಿ: ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಕವಿತಾ (34) ಎಂಬುವರ ನಿವಾಸಕ್ಕೆ ಸುಮಾರು 6-8 ಜನರು ನುಗ್ಗಿ ದಾಂಧಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜುಲೈ 25ರ ಬೆಳಗ್ಗೆ 8.30ರ ಸುಮಾರಿಗೆ ಯಾರೋ ಕವಿತಾ ಅವರ ಮನೆ ಬಾಗಿಲು ಬಡಿದ್ದಾರೆ. ಆದರೆ, ಕವಿತಾ ಅವರು 9 ಗಂಟೆ ಸುಮಾರಿಗೆ ಬಾಗಿಲು ತೆರೆದು ಹೊರಗೆ ಬಂದ ಪರಿಶೀಲಿಸಿದಾಗ ಯಾರು ಇರಲಿಲ್ಲ.
ಬಳಿಕ, ಮನೆಯ ಸಿಸಿಟಿವಿ ದೃಶ್ಯಗಳನ್ನು ಮೇಲ್ವಿಚಾರಣೆ ಮಾಡುವ ಸೈನ್ ಇನ್ ಸೆಕ್ಯುರಿಟಿಯು ಕವಿತಾ ಅವರಿಗೆ ಕರೆ ಮಾಡಿದ್ದಾರೆ. 6-8 ಜನರ ಇನ್ನೋವಾ, ಸ್ವಿಫ್ಟ್ ಕಾರಿನಲ್ಲಿ ಮನೆ ಬಳಿ ಬಂದಿದ್ದರು. ಬಳಿಕ ಕಂಪೌಂಡ್ ಹಾರಿ ಮನೆಯ ಆವರಣ ಪ್ರವೇಶೀಸಿದ್ದರು. ನಂತರ ಬಾಗಿಲು ಬಡಿದು ಮನೆಯವರನ್ನ ಕರೆದಿದ್ದಾರೆ. ಆದರೆ, ಮನೆ ಬಾಗಿಲು ತೆರೆಯದಿದ್ದರಿಂದ ಕಿಟಕಿಗಳನ್ನು ತೆರೆಯಲು ಯತ್ನಿಸಿದ್ದರು. ಆದರೆ ಸಾಧ್ಯವಾಗದ ಹಿನ್ನೆಲೆಯಲ್ಲಿ ವಾಪಸ್ ಹೋದರು. ಹೋಗುವಾಗ ಗೇಟ್ ಗೆ ಹಾನಿ ಮಾಡಿದ್ದಾರೆ ಎಂದು ಸೈನ್ ಇನ್ ಸೆಕ್ಯೂರಿಟಿ ಮಾಹಿತಿ ನೀಡಿದ್ದಾರೆ. ತಂಡ ಐಟಿ ಅಧಿಕಾರಿಗಳಂತೆ ಆಗಮಿಸಿತ್ತು. ಜೊತೆಯಲ್ಲಿ ಓರ್ವ ಪೊಲೀಸ್ ಪೇದೆಯೂ ಇದ್ದ ಎಂಬ ಮಾಹಿತಿ ಗೊತ್ತಾಗಿದೆ.
ಘಟನೆ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.