ಮನೆ ಅಪರಾಧ ಗಾಂಜಾ ಕೊಳ್ಳಲು ಮೊಬೈಲ್​ ಕಳ್ಳತನ: ಆರೋಪಿ ಬಂಧನ

ಗಾಂಜಾ ಕೊಳ್ಳಲು ಮೊಬೈಲ್​ ಕಳ್ಳತನ: ಆರೋಪಿ ಬಂಧನ

0

ಬೆಂಗಳೂರು: ಗಾಂಜಾ ಕೊಂಡುಕೊಳ್ಳಲು ಮೊಬೈಲ್​ ಕದಿಯುತ್ತಿದ್ದ ಆರೋಪಿಯನ್ನು ವೈಟ್​ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಬಿಹಾರ ಮೂಲದ ಅಬ್ದುಲ್ ರಜಾಕ್ (22) ಬಂಧಿತ ಆರೋಪಿ.

 ಬಂಧಿತ ಆರೋಪಿ ಅಬ್ದುಲ್ ರಜಾಕ್​​ನಿಂದ 32 ಮೊಬೈಲ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಬ್ದುಲ್ ರಜಾಕ್ ಬೆಂಗಳೂರಿನ ಕಾಡುಗೋಡಿಯಲ್ಲಿ ವಾಸವಾಗಿದ್ದನು. ಅಬ್ದುಲ್ ರಜಾಕ್ ಚಿಕ್ಕವಯಸ್ಸಿನಿಂದಲೇ ಕಳ್ಳತನಕ್ಕೆ ಇಳಿದಿದ್ದನು.

ಕಳೆದ ಎರಡು ವರ್ಷಗಳಿಂದ ನಗರದ ಪಿಜಿ, ಕಾರು ಪಾರ್ಕಿಂಗ್​, ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದನು. ಕದ್ದ ಮೊಬೈಲ್​ಗಳನ್ನು ಬಡವರಿಗೆ 2 ರಿಂದ 3 ಸಾವಿರ ರೂ.ಗೆ ಮಾರುತ್ತಿದ್ದನು. ಬಂದ ಹಣದಲ್ಲಿ ಗಾಂಜಾ ಖರೀದಿ ಮಾಡುತ್ತಿದ್ದನು. ಈತನ ಕೃತ್ಯದ ಬಗ್ಗೆ ವೈಟ್​ಫೀಲ್ಡ್ ಪೊಲೀಸ ಖಚಿತ ಮಾಹಿತಿ ಪಡೆದುಕೊಂಡಿದ್ದರು. ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಅಬ್ದುಲ್ ರಜಾಕ್ ನಿವಾಸದ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ.