ಮನೆ ದೇವರನಾಮ ಬಂದಿದ್ದು ಬರಲಿ ಅಂಜಿಕೆ ಏಕೆ

ಬಂದಿದ್ದು ಬರಲಿ ಅಂಜಿಕೆ ಏಕೆ

0

ಬಂದಿದ್ದು ಬರಲಿ ಅಂಜಿಕೆ ಏಕೆ
ಶ್ರೀ ಗುರು ರಕ್ಷೆ ನಮಗಿರುವಾಗ ||
ಒಮ್ಮೆ ಅವನನು ಕರೆದರೆ ಸಾಕು ||
ಓಡಿ ಕಷ್ಟವು ಕಳೆವುದು ಬೇಗ ||ಬಂದದ್ದು ||

ಮನದಲ್ಲಿ ಗುರುವೇ ನೆಲೆಸಿರುವಾಗ
ಕತ್ತಲೆ ಓಡಿ ಮರೆಯುವುದು ತಾನೇ ||
ಕಳೆವುದು ಪಾಪ ಹೃದಯದ ತಾಪ ||
ಬೆಳಗಲು ಮನದಲಿ ಭಕ್ತಿಯ ದೀಪ || ಬಂದದ್ದು ||

ಭಾಗ್ಯದ ನಿಧಿಯೇ ಬಡವರ ಸಿರಿಯೆ |
ಬೇಡದ ವರಗಳ ನೀಡಲು ಬರುವೆ |
ಎಂಥಹ ಪುಣ್ಯ ಯೋಗಿ ವರಣ್ಯೆಯ ಮೆಟ್ಟಿದ
ಮಣ್ಣಿದು ನಿಜಕು ನೀ ಧನ್ಯ |
ನಿನ್ನೆ ನಾಮ ಶಾಂತಿಯ ಧಾಮ
ಈ ಬೃಂದಾವನ ಆನಂದ ಸದನ ||
ಸತ್ಯ ಧರ್ಮ ಜ್ಯೋತಿಯ ಸ್ವರೂಪ
ನಿನ್ನೆಯ ದರ್ಶನ ಜನ್ಮಪಾವನ ||
ಶ್ರೀ ರಾಘವೇಂದ್ರಾಯ ನಮಃ ||4||