ಮನೆ ದೇವರನಾಮ ಷಷ್ಟಿಯ ವ್ರತಕ್ಕೆ ವರ ಕೊಡುವ

ಷಷ್ಟಿಯ ವ್ರತಕ್ಕೆ ವರ ಕೊಡುವ

0

ಷಷ್ಟಿ ವ್ರತಕೆ ವರಕೊಡುವ ಯುಕ್ತಾರ್ಥವ ತರುವ ||
ಸುಬ್ರಹ್ಮಣ್ಯ ಸ್ವಾಮಿಗೆ ಶರಣಾಗುವ ||
ದೇವ ದೇವರ ರಕ್ಷಿಸೆಂದು ವರ ನೀಡುವ |
ಶಡಾನನ ಶ್ರೀ ಮಲ್ಲೀಶಾ ||

ಮಡಿ ಸೇವೆ ಮಾಡುವರೋ ಹಲವರಿಲ್ಲಿ
ಕುವರಗಿರಿ ಅತ್ತುವರು ಮಲ್ಲರಿಲ್ಲಿ ||
ಕುಮಾರ ಧಾರೆಗೆ ಬಂದು ನಿಯನು |
ರೋಗ ರುಜನು ಮುಟ್ಟದು ಭಕ್ತರಲ್ಲಿ || ಷಷ್ಠಿ ವ್ರತಕೆ ||

ನೋಡಿ ನೋಡಿ ಜಡೆಯಲ್ಲ ನಾಗರ ಕಲ್ಲು
ಹಾಡೋ ಮಾತು ಹಾಡೆಲ್ಲ ನಾಗರ ಸಲ್ಲು ||
ಸುಬ್ರಹ್ಮಣ್ಯನೊಲಿದ ಮೇಲೆ ಸ್ವರ್ಗವೇ ಬಾಳು |
ಸುಬ್ರಹ್ಮಣ್ಯ ಸ್ವಾಮಿ ಹೆಸರು ಎಂದಿಗೂ ಹೇಳು || ಷಷ್ಠಿ ವ್ರತಕೆ ||