ಬೆಂಗಳೂರು(Bengaluru): ಮಕ್ಕಳ ತಲೆಗೆ ಅವರ ಪಕ್ಷದ,ಸಂಘಟನೆ ವಿಚಾರಗಳ ತುಂಬಲು ಹೊರಟಿದ್ದಾರೆ. ಅದು ಅಪರಾಧ ಹಾಗೂ ತಪ್ಪು. ಜನರೇ ಅದಕ್ಕೆ ಉತ್ತರ ಹೇಳ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಹೊಸ ಇತಿಹಾಸ ಸೃಷ್ಟಿ ಮಾಡುತ್ತಿದ್ದಾರೆ. ಯಾರು ಏನು ಮಾಡತಾರೋ ಬಿಡತ್ತಾರೋ ಅದು ಬೇರೆ ವಿಚಾರ. ಎಲ್ಲರಿಗೂ ಅಭಿಪ್ರಾಯ ಹೇಳುವ ಸ್ವಾತಂತ್ರ್ಯವಿದೆ. ಚಿಂತಕರು ಎಲ್ಲರಿಗೂ ಸ್ವಾತಂತ್ರ್ಯವಿದೆ. ಆದರೆ ಇವರು ರಾಜಕೀಯ ಅಜೆಂಡಾ ತರುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಭವಿಷ್ಯ ಹೇಳುವವರನ್ನು ಬಂಧಿಸಿ
ಇದೇ ಸಂದರ್ಭದಲ್ಲಿ ಮಂಗಳೂರಿನ ಮಳಲಿ ಮಸೀದಿ ಗೊಂದಲಕ್ಕೆ ಪ್ರತಿಕ್ರಿಯೆ ನೀಡಿ, ಅವರಿಗೆ ಏನೇನು ನಂಬಿಕೆ ಇದೆಯೋ ? ಏನೇನು ಬೇಕಾದ್ರೂ ಮಾಡಿಕೊಳ್ಳಲು. ನಾವು ಮಧ್ಯಪ್ರವೇಶ ಮಾಡಲ್ಲ. ಅವರು ಈ ರಾಜ್ಯ ಸಾಯಿಸ್ತಿದ್ದಾರೆ. ಅವರ ಸ್ವಂತಕ್ಕೆ, ಮನೆಗೆ ಏನ್ ಬೇಕಾದ್ರೂ ಮಾಡಲಿ. ಸರ್ಕಾರ ಇದೆ, ಅಲ್ಪಸಂಖ್ಯಾತ ಇಲಾಖೆ ಇದೆ, ಮುಜರಾಯಿ ಇಲಾಖೆಯೂ ಇದೆ, ಕ್ಯಾಬಿನೆಟ್ ಇದೆ, ಸರ್ಕಾರಿ ಅಧಿಕಾರಿಗಳು ಇದ್ದಾರೆ.ಆದ್ರೆ ಖಾಸಗಿಯಾಗಿ ಹೀಗೆ ಮಾಡಬಾರದು, ಅವರ ವಿರುದ್ಧ ಕೇಸ್ ಹಾಕಬೇಕು. ಇದೊಂದು ಭಾವನಾತ್ಮಕ ವಿಚಾರ. ಅದನ್ನು ಅವರು ಮನೆಯಲ್ಲಿ ಇಟ್ಟುಕೊಳ್ಳಲಿ. ಸರಕಾರ ಮಧ್ಯಪ್ರವೇಶ ಮಾಡ್ಬೇಕು, ಕೂಡಲೇ ಬಂಧಿಸಬೇಕು. ಭವಿಷ್ಯ ಹೇಳೋರನ್ನೂ ಕೂಡಲೇ ಬಂಧಿಸಬೇಕು. ಜಿಲ್ಲಾಧಿಕಾರಿ, ಎಸ್ಪಿ ಮಧ್ಯಪ್ರವೇಶ ಮಾಡ್ಬೇಕು ಎಂದು ಆಗ್ರಹಿಸಿದರು.