ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಇಬ್ಬರು ವಿದ್ಯಾವಂತ ಪರಿಚಿತರು ಭೇಟಿಯಾಗಿ ಮಾತನಾಡುತ್ತಾ ನಿಂತರು. ಹೊರಡುವಾಗ ಒಬ್ಬರು ವಾಟ್ ಇಸ್ ಯುವರ್ ಸ್ವೀಟ್ ನೇಮ್? ಎಂದು ಕೇಳಿದರು. ಇನ್ನೊಬ್ಬ ಓ, ನಾನು ಡಯಾಬಿಟಿಕ್. ಇನ್ನು ಇನ್ನು ಸ್ವೀಟ್ ಎಲ್ಲಿ ಬಂತು ಎಂದ ನಗುತ್ತಾ!

Join Our Whatsapp Group

ಗಂಡ ಲಗ್ನದ ಸರ್ಟಿಫಿಕೇಟ್ ಹಿಡಿದು ನೋಡುತ್ತಾ ಕುಳಿತಿದ್ದ. ಯಾಕ್ರೀ ಎಷ್ಟು ಹೊತ್ತಿನಿಂದ ಸುಮ್ಮನೆ ಕುಳಿತಿದ್ದೀರಲ್ಲಾ ಎಂದು ಹೆಂಡತಿ ಕೇಳಿದಳು. ಈ ಲಗ್ನದ ಸರ್ಟಿಫಿಕೆಟಿನಲ್ಲಿ ಆಗಿನಿಂದ ಎಕ್ಸ್ಪರಿ ಡೇಟ್ ಇದೆಯೇ ಎಂದು ಹುಡುಕುತ್ತಿದ್ದೇನೆ.ಎಲ್ಲೂ ಕಾಣಲೊಲ್ಲದು ಎಂದು ಬೇಜಾರಿನಿಂದ.

ಜ್ಯೋತಿ : ರೀ ನಿಮಗೆ ಕನ್ನಡ ಗ್ರ್ಯಾಮರ್ ಗೊತ್ತಾ?
ವಾಸು : ಗೊತ್ತು ಯಾಕೆ ಹೇಳು?
ಜ್ಯೋತಿ : ‘ನಾನು ಸುಂದರಿಯಾಗಿದ್ದೇನೆ’ ಇದು ಯಾವ ಕಾಲ?
ವಾಸು ನನಗೆ ಅಷ್ಟು ಗೊತ್ತಿಲ್ವೇ ಅದು ಭೂತಕಾಲ.