ಮನೆ ದೇವರ ನಾಮ ಆರಾಧನಾ ಅಭಿವಂದನ

ಆರಾಧನಾ ಅಭಿವಂದನ

0

ಆರಾಧನ ಅಭಿವಂದನ ನಿವೇಧನಾ ನೀರಾಜನ ||
ಇದೋ ಇದೋ ಗಣಪತಿ ||
ನೀ ನೀಡು ಬಾ ಸದ್ಗತಿ || ಆರಾಧನ ||

ಪ್ರಪುಲ್ಲ ಹೃದಯವ ಹಣತೆಯ ಮಾಡಿ
ಆನಂದಾಶೃವ ಎಣ್ಣೆಯ ನೀಡಿ ||
ಚಿತ್ತದ ಶಾಂತಿಯ ಬತ್ತಿಯ ಮಾಡಿ ||
ಈ ದೇಹವ ಬೆಳಗೋ ಬೆಳಕು ಮಾಡಿ || ಆರಾಧನ ||

ತ್ರಿಕರಣ ಶುದ್ಧಿಯ ಅಂಜಲಿ ಮಾಡಿ |
ಭಕ್ತಿಯ ನಿನಗೆ ಅರ್ಪಣೆ ಮಾಡಿ |
ಭಾವನೆಯ ನಿನಗೆ ಪದ್ಯವ ನೀಡಿ |
ಸರ್ವವನ್ನು ನಿವೇಧಿಸಿಹೆನಯ್ಯ |
ನನ್ನುಸಿರೇ ಧೂಪ ಆರತಿಯಾಗಿ
ಪ್ರಾಣವೇ ಪಂಚಾರತಿಯಾಗಿ ||
ಆತ್ಮವೇ ಏಕಾರತಿಯಾಗಿ ||
ಕಣ್ಣೋಟಕ ಕರ್ಪೂರ ಆರತಿಯಾಗಿ || ಆರಾಧನ ||