ಮನೆ ಅಪರಾಧ ಲಿಂಗಸೂಗೂರಲ್ಲಿ ಜೋಡಿ ಕೊಲೆ: ಪತ್ನಿ, ಅಜ್ಜಿ ಕೊಂದು ಪರಾರಿ

ಲಿಂಗಸೂಗೂರಲ್ಲಿ ಜೋಡಿ ಕೊಲೆ: ಪತ್ನಿ, ಅಜ್ಜಿ ಕೊಂದು ಪರಾರಿ

0

ರಾಯಚೂರು: ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಯ ಕ್ವಾರ್ಟರ್ಸ್ ​ನಲ್ಲಿ ಈ ಎರಡು ಕೊಲೆ ನಡೆದಿದೆ.

Join Our Whatsapp Group

ಮೃತರನ್ನು ದ್ಯಾಮವ್ವ (65) ಮತ್ತು ಹುಲಿಗೆಮ್ಮ (23) ಎಂದು ಗುರುತಿಸಲಾಗಿದೆ. ಆರೋಪಿ ದುರಗಪ್ಪ ಎಂದು ತಿಳಿದುಬಂದಿದೆ.

ಕೌಟುಂಬಿಕ ಕಲಹ ಹಿನ್ನೆಲೆ ಇಂದು ಬೆಳಗಿನ ಜಾವ ಆರೋಪಿ ದುರ್ಗಪ್ಪ ತನ್ನ ಪತ್ನಿ ಜ್ಯೋತಿ ಹಾಗೂ ಅಜ್ಜಿಯನ್ನು ಬರ್ಬರವಾಗಿ ಹತ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಅಲ್ಲದೇ ಮುದಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದುರುಗಪ್ಪ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದ. ಸದ್ಯ ಘಟನಾ ಸ್ಥಳಕ್ಕೆ ಮುದಗಲ್ ಪೊಲೀಸ್ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಘಟನೆಯಿಂದ ಪಟ್ಟಣದ ಜನ ಬೆಚ್ಚಿಬಿದ್ದಿದ್ದಾರೆ. ಈ ಘಟನೆ ಕುರಿತು ಮುದಗಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.