ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವೆಂಕಿ : ನಾನು ಕೋಪ ಮಾಡ್ಕೊಂಡ್ರೆ ಹೇಗೆ ಕಾಣಿಸ್ತೀನಿ?
ವಾಸು : ನೀನು ಕೋಪ ಮಾಡ್ಕೊಂಡ್ರೆ ಮಾನವ ಹಿಂದೆ ಮಂಗ ಆಗಿದ್ದಾ ಅನ್ಸುತ್ತೆ. ಆದ್ದರಿಂದ ಕೋಪ ಮಾಡ್ಕೋಬೇಡ.
ವೆಂಕಿ : ಕೋಪ ಮಾಡಿಕೊಳ್ತೀನಿ ಆಗ ಏನನಿನ್ಸುತ್ತೆ?
ವಾಸು ಏನನ್ಸುತ್ತೆ ಅಂದ್ರೆ?ಮಾನವ ಈಗಲೂ ಕೋಟಿ ಆಗಿದ್ದಾನೆ ಅನ್ಸುತ್ತೆ.

Join Our Whatsapp Group

ಮೇಡಂ : ಬೇರೆಯವರು ಕಷ್ಟದಲ್ಲಿರೋವಾಗ ನಾವು ಕೈಲಾದ ಸಹಾಯ ಮಾಡಬೇಕು.
ವಾಸು : ನೀವು ಹೇಳೋ ಮಾತು ಸುಳ್ಳು.
ಮೇಡಂ : ನಾನೆಂದಿಗೂ ಸುಳ್ಳು ಹೇಳೊಲ್ಲ.ಅದೇಗೆ ಸುಳ್ಳೂ ಅಂತ ಹೇಳ್ತೀಯ?
ವಾಸು : ಎಕ್ಸಾಮ್ ನಲ್ಲಿ ಎಂದಾದರೂ ನನಗೆ ಸಹಾಯ ಮಾಡಿದಿರಾ,ನಿಜ ಹೇಳಿ?

ಬಾಸ್ : ವಾಸು,ಪಂಕಜನ್ನ ಕೆಲಸಕ್ಕೆ ತೆಗೆದುಕೊಂಡವರಾರು?
ವಾಸು : ನಾನೇ ಬಾಸ್, ಏಕೆ ಏನಾಯ್ತು?
ಬಾಸ್ : ಬರೀ ತಪ್ಪು ತಪ್ಪು ಟೈಪ್ ಮಾಡ್ತಿದ್ದಾಳೆ. ನಾನು ನಿನಗೆ ಹೇಳಿದ್ದೇನು ಗ್ರಾಮರ್ ನೋಡಿ ತಗೋ ಅಂತ ತಾನೆ?
ವಾಸು : ಕ್ಷಮಿಸಿ ಬಾಸ್, ನೀವು ಗ್ರಾಮರ್ ಅಂದಿದ್ದು ಗೊತ್ತಾಗ್ದೆ ಗ್ಲಾಮರ್ ಅಂತ ತಿಳಿದು ಅವಳ ಲಕ್ಷಣ ನೋಡಿ ತಗೊಂಡೆ.