ಮನೆ ಯೋಗಾಸನ ಸೇತುಬಂಧಾಸನ

ಸೇತುಬಂಧಾಸನ

0

      ‘ಸೇತು’ ಎಂದರೆ ಸೇತುವೆ. ‘ಸೇತುಬಂಧನ’ವೆಂದರೆ ಸೇತುವೆಯನ್ನು ಕಟ್ಟಿ ನಿಲ್ಲುವುದು ಈ ಭಂಗಿಯಲ್ಲಿ ದೇಹವೆಲ್ಲವೂ ಸೇತುವೆಯ ತಳಭಾಗದ ಕಮಾಲಿನಂತೆ ಬಗ್ಗಿ, ಅಂದರೆ ಒಂದು ಕಡೆ ನಡುತಲೆ, ಮತ್ತೊಂದು ಕಡೆ ಪಾದಗಳು ಇವುಗಳ ಆಧಾರದಮೇಲೆ ನಿಲ್ಲುತ್ತದಾದುದರಿಂದ ಈ ಹೆಸರು ಆಸನಕ್ಕೊಳ್ಳಪಡಿಸಿದೆ.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು,ಬೆನ್ನನ್ನು ನೆಲದ ಮೇಲೊರಗಿಸಿ, ಚಪಟ್ಟೆಯಾಗಿ, ಉದ್ದಕ್ಕೂ ಮಲಗಿ,ಕೆಲವುಸಾರಿ ಅಳವಾಗಿ ಉಸಿರಾಟ ನಡೆಸಬೇಕು.

2. ಬಳಿಕ,ಮಂಡಿಗಳನ್ನು ಭಾಗಿಸಿ, ಅವುಗಳ ಬಳಿ ಕಾಲುಗಳನ್ನ ಗಲಿಸಿ, ಕಾಲ ಹಿಮ್ಮಡಿಗಳನ್ನು ಪೃಷ್ಠಗಳ ಕಡೆಗೆ ಸರಿಸಬೇಕು.

3. ಆಮೇಲೆ, ಹಿಮ್ಮಡಿಗಳನ್ನು ಜೋಡಿಸಿ,ಅವುಗಳ ಹೊರಬದಿಯನ್ನು ನೆಲದ ಮೇಲೆ ಭದ್ರವಾಗಿ ಊರಬೇಕು.

4. ಆನಂತರ ಕೈಗಳನ್ನು ತಲೆಯ ಪಕ್ಕಗಳಿಗೆ ತಂದು, ಉಸಿರನ್ನು ಹೊರಕ್ಕೆ ಬಿಡುತ್ತ ಮುಂಡವನ್ನು ಮೇಲೆತ್ತಿ, ದೇಹವನ್ನು ಕಮಾನಿನಂತೆ ಬಗ್ಗಿಸಿ,ನಡುತಲೆಯನ್ನು ನೆಲದ ಮೇಲೂರುವಂತೆ ಮಾಡಬೇಕು. ಆ ಬಳಿಕ ಕತ್ತನ್ನು ಮೇಲ್ಗಡೆಗೆ ಹಿಗ್ಗಿಸಿ, ಬೆನ್ನುಮೂಳೆಯ ಕೆಳಭಾಗ ಮತ್ತು ಟೊಂಕದೆಡೆಗಳನ್ನು ನೆಲದಿಂದ ಮೇಲೆತ್ತುವುದರ ಮೂಲಕ ತಲೆಯನ್ನು ಸಾಧ್ಯವಾದಷ್ಟು ಹಿಂದೆಳೆದು  ನೆಲದಮೇಲೆ ಊರಿಡಬೇಕು.

5. ಆ ಬಳಿಕ,ತೋಳುಗಳರೆಡನ್ನೂ ಎದೆಯ ಮೇಲೆ ಒಂದಕ್ಕೊಂದು ಸೇರಿಸಿಟ್ಟು, ಅದಂರೆ ಎಡಮೊಗೈಯನ್ನೂ ಬಲಗೈಯಿಂದಲೂ, ಬಲ ಮೊಣಗೈಯನ್ನು ಎಡಗೈಯಿಂದಲೂ ಹಿಡಿದುಕೊಂಡು ಎರಡು ಮೂರು ಸಲ ಉಸಿರಾಟ ನಡೆಸಬೇಕು.

6. ತರುವಾಯ ಉಸಿರನ್ನು ಹೊರಕ್ಕೆಬಿಟ್ಟು, ಟೊಂಕ ಗಳನ್ನು ಮೇಲೆತ್ತಿ ಕಾಲುಗಳನ್ನು ನೇರವಾಗಿ ಚಾಚಿಸಬೇಕು. ಈಗ ಎರಡೂ ಪಾದಗಳನ್ನು ಜೋಡಿಸಿ,ಅವುಗಳ ನೆಲದ ಮೇಲೆ ಚೆನ್ನಾಗಿ ಒತ್ತಿರಿಸಬೇಕು. ಈ ಭಂಗಿಯಲ್ಲಿ ದೇಹವಲ್ಲವೂ ಒಂದು ಕಮಾನಿನ ಸೇತುವೆಯ ಆಕಾರವನ್ನು ಹೋಲುತ್ತದೆ. ಇದಕ್ಕೆ ಒಂದು ಕಡೆ ಪಾದಗಳಾಧಾರ ಮತ್ತೊಂದು ಕಡೆ ನಡುನೆತಿಯ ಆಸರೆ.

7. ಈ ಭಂಗಿಯಲ್ಲಿ, ಕೆಲವು ಸೆಕೆಂಡುಗಳ ಕಾಲ ಸಾಮಾನ್ಯ ಉಸಿರಾಟದಿಂದ ನೆಲೆಸಬೇಕು.

8. ಕಡೆಯಲ್ಲಿ ಉಸಿರನ್ನು ಹೊರ ದೂಡಿ, ಕೈಗಳ ಬಂಧನವನ್ನು ಬಿಚ್ಚಿ,ಅವನ್ನು ನೆಲದಮೇಲಿ ರಿಸಿ, ಮಂಡಿಗಳನ್ನು ಬಾಗಿಸಿ, ಕಾಲುಬೆನ್ನುಗಳನ್ನು ನೆಲದ ಮೇಲೆಳಿಸಿ, ತಲೆಯ ಮೇಲಿನ ಬಿಗಿತವನ್ನು ಸಡಿಲಿಸಿ, ಕತ್ತನ್ನು ನೇರಮಾಡಿ,ಬೆನ್ನೂರಿನ ನೆಲದ ಮೇಲೆ ಮಲಗಬೇಕು.

ಪರಿಣಾಮಗಳು 

     ಈ ಆಸನವು ಕುತ್ತಿಗೆಗೆ ಶಕ್ತಿ ಕೊಟ್ಟು ಕುತ್ತಿಗೆಯ ಬೆನ್ನಮೂಳೆಯ ತಳಭಾಗ ಟೊಂಕ ತ್ರಿಕಾಸ್ಥಿಯ ಅಂದರೆ ಬೆನ್ನುಮೂಳೆಯ ಕೊನೆಯ ಭಾಗ ಅಥವಾ ಸ್ಯಾಕ್ರಂಮೂಳೆಯ ಭಾಗಗಳಿಗೆ ಅವುಗಳ ಕಾರ್ಯನಿರ್ವಹಣೆ ಶಕ್ತಿಯನ್ನೂ ಹುರುಪನ್ನೂ ಕೊಡಲು ನೆರವಾಗುತ್ತದೆ. ಅಲ್ಲದೆ ಬೆನ್ನು ಪ್ರದೇಶದಲ್ಲಿಯ ದೇಹ ಭಾಗವನ್ನು ಚಾಚುವ ಮಾಂಸಖಂಡವು ಬಲಗೊಂಡು ಬೆಳೆಯುವುದಕ್ಕೂ ಟೊಂಟಗಳು ಸಂಕುಚಿಸಿ ಗಟ್ಟಿಯಾ ಗುವುದಕ್ಕೂ ಈ ಆಸನವೂ ತುಂಬಾ ಸಹಕರಿಯಾಗಿದೆ. ಇದರ ಜೊತೆಗೆ ಮೆದುಳಿನ ಬುಡದಲ್ಲಿನ ಶ್ಲೇಷ್ಮಸ್ರಾವಿನಿರ್ನಾಳಗ್ರಂಥಿಗಳು ಕಂಠ ಭಾಗದಲ್ಲಿಯ ಶ್ವಾಸನಾಳದ ಮೇಲಿರುವ ಗ್ರಂಥಿಗಳು ಮತ್ತು ಮೂತ್ರ ಜನಾಂಗಗಳ ನ್ನಂಟಿಕೊಂಡಿರುವ ನಿರ್ನಾಳ ಗ್ರಂಥಿಗಳನ್ನೆಲ್ಲ ಶುದ್ಧ ರಕ್ತ ಪ್ರವಾಹದಲ್ಲಿ ಮುಳುಗಿಸಿ ಅವುಗಳು ತಮ್ಮ ಕಾರ್ಯಗಳನ್ನು ನೆರವೇರಿಸಿಕೊಂಡು ಬರಲು ಈ ಆಸನವು ಸಹಕಾರಿಯಾಗಿವೆ.