ಮನೆ ಜ್ಯೋತಿಷ್ಯ ರಕ್ತ ಹೀನತೆ ಆಹಾರದಿಂದ ಪರಿಹಾರ

ರಕ್ತ ಹೀನತೆ ಆಹಾರದಿಂದ ಪರಿಹಾರ

0

   ★ ಪೌಷ್ಟಿಕ ಆಹಾರ ಮತ್ತು ಕಬ್ಬಿಣಾಂಶ ಹೆಚ್ಚಿರುವ ಸಸ್ಯಾಹಾರ ಮತ್ತು ಮಾಂಸಾಹಾರಗಳ ಸೇವನೆ, ಹಾಲು ಹಾಲಿನ ಉನ್ನತ, ಮಿನು, ಮೊಟ್ಟೆ ಬೀಟ್ರೋಟ್, ಬೂದುಕುಂಬಳಕಾಯಿ ಮೆಂತ್ಯ ಸೊಪ್ಪು, ನುಗ್ಗೆಸೊಪ್ಪು, ಬೇಳೆ ಕಾಳು,ಪ್ರಾಣಿಗಳ ಲಿವರ್ ಮತ್ತು ಕಿಡ್ನಿಗಳಲ್ಲಿ ಕಬ್ಬಿಣಾಂಶ ಹೆಚ್ಚಾಗಿರುತ್ತದೆ.ಇವುಗಳ ನಿಯಮಿತ ಸೇವೆನೆ ಉಪಯೋಗಕಾರಿ.

Join Our Whatsapp Group

     ★ರಕ್ತ ಹೀನತೆಯವರು ಕಾಫಿ, ಟೀ ಸೇವನೆಯನ್ನು ನಿಲ್ಲಿಸಬೇಕು.ಕಾಫಿ ಟೀ ಸೇವನೆಯೂ ನಾವು ತಿನ್ನುವ ಆಹಾರದಲ್ಲಿರುವ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಶಕ್ತಿಯನ್ನು ಕಡಿಮೆ ಮಾಡುತ್ತದೆ.ಕಾಫಿಯಲ್ಲಿ ಶೇಕಡ 40 ಭಾಗವು, ಚಹಾದಲ್ಲಿ ಶೇಕಡ 70 ಭಾಗ ಪ್ರಮಾಣದಲ್ಲಿ ಕಬ್ಬಿಣಾಂಶ ಹೀರುವ ಶಕ್ತಿ ಕಡಿಮೆಯಾಗುತ್ತದೆಂದು ತಿಳಿದು ಬಂದಿದೆ.

  ★ ವೈದ್ಯರ ಶಿಫಾರಸ್ಸಿನಂತೆ  14 -18 ವರ್ಷದ ಹುಡುಗಿಯರು 15 ಮಿಲಿ ಗ್ರಾಂ 19- 50 ದೊಳಗಿನ ಮಹಿಳೆಯರು 18 ಮಿಲಿಗ್ರಾಂ, ಗರ್ಭಿಣಿಯರಿಗೆ 17 – 22 ಮಿಲಿ ಗ್ರಾಂ,ಹಾಲುನೀಡುವ ತಾಯಂದಿರು 15 ಮಿಲಿ ಗ್ರಾಂ,50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 8 ಮಿಲಿಗ್ರಾಂನಷ್ಟು ಕಬ್ಬಿಣಾಂಶ ಇರುವಂತೆ ಮಾತ್ರೆ ಅಥವಾ ಸಿರಪ್ ಸೇವಿಸಬಹುದು.

    ★ಋತುಸ್ರಾವ ಬಗ್ಗೆ – ಮಾನಸಿಕಸ್ರಾವ ಮಾಮೂಲಿಗಿಂತ ಹೆಚ್ಚಾದಲ್ಲಿ ರಕ್ತಹೀನತೆ ಉಂಟಾಗುತ್ತದೆ. ಹಾಗಾಗಿ ವೈದ್ಯರು ಸಲಹೆಯಂತೆ ಕಬ್ಬಿಣಾಂಶವಿರುವ ಆಹಾರವನ್ನು ಹೆಚ್ಚು ಉಪಯೋಗಿಸಬಹುದು.

    ★ನಿಯಮಿತವಾಗಿ, ಕಿತ್ತಲೆ ಮತ್ತು ನಿಂಬೆರಸ ಸೇವಿಸಿ. ಆಹಾರದಲ್ಲಿರುವ ಕಬ್ಬಿಣಾಂಶವನ್ನು ಸಣ್ಣಕರುಳು ಹೀರಿಕೊಳ್ಳಲು, ನಾವು ಸಿ ವಿಟಾಮಿನ್ ಯುಕ್ತ ಆಹಾರಗಳನ್ನು ಸೇವಿಸಬೇಕು.  

    ★ಆಹಾರವನ್ನು ಕಡಿಮೆ ನೀರು ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಬೇಯಿಸಿದಾಗ ಅದರಲ್ಲಿ ಕಬ್ಬಿಣಾಂ ಶ ನಷ್ಟವಾಗುತ್ತದೆ ನಷ್ಟವಾಗದೇ ಇರುತ್ತದೆ.

   ★ಸಣ್ಣ ಮಕ್ಕಳಿಗೆ ಹೆಚ್ಚು ಎದೆ ಹಾಲು ನೀಡಿ ಅದರಲ್ಲಿ ಹೆಚ್ಚು ಕಬ್ಬಿಣಾಂಶವಿರುತ್ತದೆ

   ★ ಕಬ್ಬಿಣದ ಪಾತ್ರೆಯಲ್ಲಿ ಬೇಯಿಸಿದ ಆಹಾರ ಸೇವನೆಯಿಂದ ಸಹಜವಾಗಿ ಹೆಚ್ಚು ಕಬ್ಬಿಣಾಂಶ ದೇಹಕ್ಕೆ ಸೇರುತ್ತದೆ. ಸೇಬಿನಲ್ಲಿ ಅಧಿಕ ಕಬ್ಬಿಣಾಂಶವಿರುತ್ತದೆ. ಕಬ್ಬಿಣಾಂಶ ಕಡಿಮೆ ಇರುವವರು ದಿನಕ್ಕೆ ಒಂದೆರಡು ಸೇಬು ಸೇವಿಸಿ, ಬೀಟ್ರೂಟ್ ಅಥವಾ ಅದರ ರಸವನ್ನು ಕುಡಿಯಿರಿ ರಕ್ತ ವೃದ್ಧಿಯಾಗುತ್ತದೆ..

   ★ರಕ್ತಹೀನತೆ ಇರುವವರು ದಿನಕ್ಕೆ ಎರಡು ಬಾರಿ ತಣ್ಣೀರಿನ ಸ್ನಾನ ಮಾಡಿ.

  *ತರಕಾರಿ ಮತ್ತು ಹಣ್ಣುಗಳಿಂದ ಪರಿ ಹಾರಗಳು

 ತರಕಾರಿಗಳು:

 ಬೀನ್ಸ್ ನಲ್ಲಿ – ಕ್ಯಾಲೋರಿ ಕಡಿಮೆಯಿದ್ದರೂ ಸಹ ಪೋಷಕಾಂಶ ಹೇರಳವಾಗಿದೆ. ಇದರಲ್ಲಿ ‘ಸಿ’ ಮತ್ತು ‘ಕೆ’ ವಿಟಾಮಿನ್ ಮ್ಯಾಂಗನ್ನಿಸ್ ನಂತಹ ಖಣಿಜ, ಲವಣಗಳು ಇವೆ. ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ದೇಹಕ್ಕೆ ಶಕ್ತಿಯನ್ನು ನೀಡುವ ಕ್ರಿಯೆ ಉತ್ತಮವಾಗಿ ಮಾಡುತ್ತದೆ.

  ನೆಲ್ಲಿಕಾಯಿ, ಸೀಬೆಹಣ್ಣು, ಪಪ್ಪಾಯಿ, ಮೂಸಂಬಿ, ಅನಾನಸ್, ನಿಂಬೆ, ಸೀತಾಫಲ, ಕಿತ್ತಲೆ ಹಣ್ಣು ಟೊಮೆಟೊ ಹಣ್ಣು, ಕರ್ಜು ಕರ್ಬೂಜ,  ನೇರಳೆ, ಮಾವು, ದಾಳಿಂಬೆ  ಇತ್ಯಾದಿ ಹಣ್ಣುಗಳು.

     ನುಗ್ಗೆಕಾಯಿ, ಕೊತ್ತಂಬರಿ, ದಂಟಿನ್ ಸೊಪ್ಪು,ಪುದೀನಾ, ಹಾಗಲಕಾಯಿ, ನವಿಲುಕೋಸು, ಸೌತೆಕಾಯಿ, ಈರುಳ್ಳಿ,ಅನೇಕ ವಿಧದ ಸೊಪ್ಪು,ಅದರಲ್ಲೂ ನುಗ್ಗೆ ಸೊಪ್ಪಿನಲ್ಲಿ ಹೆಚ್ಚು ಕಬ್ಬಿಣಾಂಶವಿದೆ.

   ★ರಕ್ತಹೀನತೆಯಿಂದ ಬಳಲುತ್ತಿರುವವರು  ಒಂದು ಚಮಚ ನೆಲ್ಲಿಕಾಯಿ ರಸವನ್ನು ಅರ್ಧ ಲೋಟ ಕಬ್ಬಿನ ಹಾಲಿನಲ್ಲಿ ದಿನಕ್ಕೆ ಎರಡು ಬಾರಿ ಸೇವಿಸಬೇಕು.

    ★ಒಣದ್ರಾಕ್ಷಿ ಖರ್ಜೂರ ಇದರ ಸೇವೆಗೆ ರಕ್ತಹೀನತೆಗೆ ಉತ್ತಮ.

    ★ಗೋಧಿ ಹುಲ್ಲಿನ ರಸ – ಇದರಲ್ಲಿರುವ ಕ್ಲೋರೋಫಿಲ್ ರಕ್ತದಲ್ಲಿ ಸೇರಿ ರಕ್ತ ಉತ್ಪತ್ತಿಯನ್ನು ಹೆಚ್ಚಿಸಿ;ಹಿಮೋಗ್ಲೋಬಿನ್ ರಕ್ತದಲ್ಲಿ ಅಗತ್ಯ ಮಟ್ಟಕ್ಕೆ ತರುತ್ತದೆ. ದೇಹದಲ್ಲಿ ಉತ್ತಮ ಉತ್ಪತ್ತಿಯಾಗುವ ಕೆಂಪು ಅಥವಾ ಬಿಳಿರಕ್ತ ಕಣಗಳು ಇದರ ಸೇವನೆಯಿಂದ ಹೆಚ್ಚಾಗುತ್ತದೆ.