ಮನೆ ಅಪರಾಧ ಡ್ರಗ್ಸ್​ ಪ್ರಕರಣ: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್​ ಆರೋಪ ಮುಕ್ತ

ಡ್ರಗ್ಸ್​ ಪ್ರಕರಣ: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್​ ಆರೋಪ ಮುಕ್ತ

0

ಮುಂಬೈ(ಮಹಾರಾಷ್ಟ್ರ): ಮುಂಬೈನ ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣ ಎದುರಿಸುತ್ತಿದ್ದ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಪುತ್ರ ಆರ್ಯನ್​ಗೆ ಕ್ಲೀನ್ ಚೀಟ್ ದೊರೆತಿದೆ.

ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಶುಕ್ರವಾರ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಆರ್ಯನ್ ಖಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಆರ್ಯನ್ ಖಾನ್ ಹೆಸರನ್ನು ಕೈಬಿಟ್ಟಿದೆ.

ಪ್ರಕರಣದಲ್ಲಿ ಮುನ್ಮುನ್ ಧಮೇಚಾ ಮತ್ತು ಅರ್ಬಾಜ್ ಮರ್ಚೆಂಟ್ ಎನ್ನುವವರ ಹೆಸರು ಇದ್ದು ಆರ್ಯನ್ ಖಾನ್ ಸೇರಿದಂತೆ ಒಟ್ಟು 6 ಜನರ ಹೆಸರನ್ನು ತೆಗೆದು ಹಾಕಿದೆ. 6 ಜನರ ವಿರುದ್ಧ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಸಾಕ್ಷ್ಯಾಧಾರ ಪತ್ತೆಯಾಗದ ಹಿನ್ನೆಲೆ ಆರ್ಯನ್ ಖಾನ್ ಜೊತೆ ಸಾಹು, ಆನಂದ್, ಸುನಿಲ್ ಸೆಹ್, ಅರೋರಾ ಸೇರಿದ್ದಾರೆ.

ಅಕ್ಟೋಬರ್ 2 ರಂದು, ಕ್ರೂಸ್ ಮೇಲೆ ಎಎಸ್​ಸಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಇದರಲ್ಲಿ ಶಾರುಖ್​ ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು. ದಾಳಿ ಮಾಡಿದ ಸ್ಥಳದಲ್ಲೇ 6 ಜನರನ್ನು ಬಂಧಿಸಲಾಗಿತ್ತು.