ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಶಿಕ್ಷಕ : ನಿನ್ನೆ ಎ.ಬಿ.ಸಿ.ಡಿ ಅಕ್ಷರಗಳ ಹೇಳಿಕೊಟ್ನಲ್ಲ ಎಲ್ಲಾ ಹೇಳು ವಾಸು.
ವಾಸು : ಎ.ಸಿ.ಇ.ಎಫ್.
ಶಿಕ್ಷಕ : ಸಾಕು ನಿಲ್ಸೋ
ವಾಸು : ಯಾಕೆ ಸಾರ್?
ಶಿಕ್ಷಕ : ಅಲ್ಲೋ ಎ. ಸಿ. ಇ.ಎಫ್. ಅಂತ ಹೇಳಿದ್ಯಲ್ಲ ಬೀಡಿ.ಯಾರ್ಗೋ ಬಿಟ್ಟೆ?
ವಾಸು : ನಂಗೆ ಬೀಡಿ ಸೇದೋದು ಬಿಡ್ಸಿದಾರೆ ಸಾರ್,ಬೀಡಿ ಹೆಸರು ಎತ್ತ ಬಾರದು ಅಂತ್ಲೂ ಹೇಳಿದ್ದಾರೆ. ಅದಕ್ಕೆ ಬಿಟ್ಟೆ.

Join Our Whatsapp Group

ಇಬ್ಬರು ಸ್ನೇಹಿತೆಯರು ಮಾತನಾಡುತ್ತಿದ್ದರು. ನನ್ನ ಮಗನಿಗೆ ಸ್ಕೂಲಿಗೆ ಹೋಗುವುದೇ ಬೇಡ.ಬರೀ ಹಠ ಮಾಡುತ್ತಾನೆ ಎಂದಳು ಒಬ್ಬಳು. ಇನ್ನೊಬ್ಬಳು, ನನ್ನ ಮಗುವಿಗೆ ಸ್ಕೂಲಿಗೆ ಹೋಗುವುದು ತುಂಬಾ ಇಷ್ಟ ಅದಕ್ಕೆ ಒಂದೊಂದು ಕ್ಲಾಸಿನಲ್ಲಿ 2-3 ವರ್ಷ ಕುಳಿತುಕೊಳ್ಳುತ್ತಾನೆ ಎಂದಳು!

ವೆಂಕಿ : ಅಲ್ವೋ ವಾಸು ಆಟೋ ರಿಕ್ಷದ ಚಕ್ರಾ ಏಕೆ ಕಳುಚ್ತಾ ಇದ್ದೀಯ?
ವಾಸು : ಅಲ್ಲಿರೋ ನಾಮಫಲಕ ಓದು ನಿಂಗೆ ಗೊತ್ತಾಗುತ್ತೆ.
ವೆಂಕಿ : ದ್ವಿಚಕ್ರನ ವಾಹನಗಳಿಗೆ ಮಾತ್ರ ಪಾರ್ಕಿಂಗ್.
ವಾಸು : ಅದಕ್ಕೆ ನನ್ನ ಗಾಡಿನ ದ್ವಿಚಕ್ರ ವಾಹನವನ್ನಾಗಿ ಮಾಡ್ತಾ ಇದ್ದೀನಿ.