ಮನೆ ಅಪರಾಧ ಮಂಡ್ಯ: ಕರ್ತವ್ಯ ನಿರತ ಟ್ರಾಫಿಕ್ ಮಹಿಳಾ ಪೇದೆ ಮೇಲೆ ಬೈಕ್ ಹರಿಸಿದ ಪುಂಡರು

ಮಂಡ್ಯ: ಕರ್ತವ್ಯ ನಿರತ ಟ್ರಾಫಿಕ್ ಮಹಿಳಾ ಪೇದೆ ಮೇಲೆ ಬೈಕ್ ಹರಿಸಿದ ಪುಂಡರು

0

ಮಂಡ್ಯ: ಕರ್ತವ್ಯ ನಿರತ ಪೊಲೀಸ್ ಮೇಲೆ ಬೈಕ್ ಹರಿಸಿದ ಘಟನೆ ಮಂಡ್ಯ ನಗರದ ಕರ್ನಾಟಕ ಬಾರ್ ಸರ್ಕಲ್ ಬಳಿ ನಡೆದಿದೆ.

Join Our Whatsapp Group

ಸ್ಕೂಟರ್ ಸವಾರರು ಸಂಚಾರ ನಿಯಮ ಉಲ್ಲಂಘಿಸಿ ಒನ್ ವೇ ನಲ್ಲಿ ಬಂದಿದ್ದು, ತಡೆಯಲು ಬಂದ ಟ್ರಾಫಿಕ್ ಮಹಿಳಾ ಪೇದೆ ಮೇಲೆ ಸ್ಕೂಟರ್ ಚಲಾಯಿಸಿ ಪುಂಡರು ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಮಹಿಳಾ ಪೇದೆಗೆ ತೀವ್ರ ಗಾಯವಾಗಿದ್ದು, ಗಾಯಗೊಂಡ ಪೇದೆಯನ್ನು ಸಾರ್ವಜನಿಕರು ರಕ್ಷಿಸಿದ್ದಾರೆ. ನಂತರ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪುಂಡರ ಹುಡುಕಾಟಕ್ಕೆ ಮುಂದಾಗಿದ್ದಾರೆ . ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.