ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಬ್ರಹ್ಮ :ಭಕ್ತ ನಿನ್ನ ತಪಸ್ಸಿಗೆ ಮೆಚ್ಚಿದೆ ಏನು ವರ ಬೇಕು ಕೇಳು.

 ವಾಸು : ನನ್ನ ತಪಸ್ಸು ಕೆಡಿಸಲು ಮೊದ್ಲು ಮೇನಕೇನ ಕಳ್ಸು, ಅಷ್ಟೇ ನನ್ನ ಕೋರಿಕೆ.

Join Our Whatsapp Group

***

 ಮೇಡಂ : ವಾಸು ಗ್ರಹಣಗಳಲ್ಲಿ ಎಷ್ಟು ವಿಧಾ?

 ವಾಸು : ಮೂರು ವಿಧ ಮೇಡಂ.

 ಮೇಡಂ : ಸೂರ್ಯಗ್ರಹಣ, ಚಂದ್ರ ಗ್ರಹಣ, ಎರಡೇ ಅಲ್ವೇನೋ?

 ವಾಸು : ಪಾಣಿಗ್ರಹಣ ಬಿಟ್ಟೇ ಬಿಟ್ರಲ್ಲ ಮೇಡಂ!

***

 ವಾಸು : ಜ್ಯೋತಿ ಕನ್ನಡಕ ತಂದಿದ್ದು ಜರ್ಮನಿಯಿಂದ.ಬೆಲೆ ಎಷ್ಟು ಗೊತ್ತೇನು?

 ಜ್ಯೋತಿ : ಅದರ ಬೆಲೆ ಎಷ್ಟು?

 ವಾಸು : 300 ಇದು,ಜಪಾನ್ ಶರ್ಟ್ 600 ಇದು, ಚೀನಾ ಪ್ಯಾಂಟು ಇದರ ಬೆಲೆ ಗೊತ್ತೇನು?

 ಜ್ಯೋತಿ : ನಂಗೇನು ಗೊತ್ತಾಗುತ್ತೆ ಹೇಳಿದ್ರೆ ಗೊತ್ತಾಗುತ್ತೆ.

 ವಾಸು : ಈ ಪ್ಯಾಂಟಿನ ಬೆಲೆ ರೂ.3000ರೂಪಾಯಿ.

 ಜ್ಯೋತಿ : ಹೌದೇ, ಮೊದಲು ಪ್ಯಾಂಟಿನ ಜಿಪ್ ಹಾಕೋ 15 ರೂಪಾಯ್ನ ಚಡ್ಡಿ ಕಾಣಿಸುತ್ತೆ.