ಮನೆ ದೇವಸ್ಥಾನ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ

0

 ಕಳಸ್ತ್ಯ ದೇವಾಲಯದ ಕಡತದಲ್ಲಿ ಅಗತ್ಯ ಉಲ್ಲೇಖಿತ ಹೊರನಾಡ ಹೋರಾಟ ಶ್ರೀ ಅನ್ನಪೂರ್ಣೇಶ್ವರಿ .

 ಶಿವನು ಬ್ರಹ್ಮ ಹತ್ಯಾ ಪಾಪ ನಿವಾರಣೆಗಾಗಿ ನಾನಾ ಕಡೆ ಅಲೆದಾಡಿದನು.ಕೊನೆಗೆ ಸುಂದರ ಕಾಡುಳ್ಳ ಸಹರಿ ತಪ್ಪಲಿಗೆ ಬಂದನು.

Join Our Whatsapp Group

 ತತ್ರ ಘೋರಂ ತಪಃ ಕೃತ್ವಾ

 ಲಿಪ್ತ ದೋಷಮಮಾರ್ಜಯತ್ |

 ಜಾಹ್ನವೀ ತೋಯಪತೇನ

 ಮಹಾನ್ ಹೃದಃ ಸಮಾಭವತ್ ||*

 ಅಲ್ಲಿ ಘೋರ ತಪಸ್ಸನ್ನು  ಮಾಡಿ ಅಂಟಿದ ಪಾಪವನ್ನು ಕಳೆದುಕೊಂಡನು. ಗಂಗಾಜಲದ ಅಭಿಷೇಕದಿಂದಾಗಿ ಒಂದು ಸರೋವರವು ಉಂಟಾಯಿತು.

 ಸಃ ಹೃದಃ ವರದಾ ನಾಮ್ನಾ

 ವಿಖ್ಯಾತ ಜಗತೀತಲೇ |

 ನಾನಾ ತೀರ್ಥೈ ಚ ಸಂಯುಕ್ತಃ

 ಶೈವ ಕ್ಷೇತ್ರಂ ಸಮಾ ಭವತ್  ||

 ಹಳ್ಳವು ಜಗತ್ತಿನಲ್ಲಿ ವರದಾ ಎಂದು ಪ್ರಖ್ಯಾತವಾಯಿತು.

 ತತಂ ಸಂ ಕುಟಜಾನಾಮ

 ಪರ್ವತಂ ಪ್ರತಿ ಪ್ರಸ್ಥಿತಃ |

 ಪಾರ್ವತಿ ಸಹಿತಃ ಶುಭಂಃ

 ಸಾನಂದಮಯ ಮುಷಿತ ವಾನ್

 ಅಲ್ಲಿಂದ ಪಾರ್ವತಿ ಸಹಿತನಾದ ಪರಶಿವನು ಕೊಡಚಾದ್ರಿ ಪರ್ವತದ ಕಡೆಗೆ ಹೊರಟು ಆನಂದದಿಂದ ವಾಸಿಸ ತೊಡಗಿದನು.

 ವಿಶ್ವನಾಥ ಸ್ವಯಂ ಶಂಭು

 ಪ್ರಸ್ಥಿತಃ ಕಲಶಂಪ್ರಿತಿ |

 ತತ್ರತ್ಯ ರಮ್ಯತಾಃ ದೃಷ್ಟ್ವ

 ತದ್ದೇಶೇ ಸ ಸ್ಥಿತಃ ಮುದಾ ||

 ವಿಶ್ವನಾಥನೇ ಆದ ಶಂಭು ಕಳಸಾದ ಕಡೆಗೆ ಹೊರಟನು ಅಲ್ಲಿಯ ಪ್ರಕೃತಿ ರಮಣೀಯತೆಯ ಸೌಂದರ್ಯವನ್ನು ನೋಡಿದ ಅವನು ಅಲ್ಲಿಯೆ ಆನಂದದಿಂದ ನೆಲೆನಿಂತನು.

 *ಅನ್ನಪೂರ್ಣ ಮಹಾದೇವೀ

 ಮಹೇಶ ಪ್ರಾಣವಲ್ಲ ಬಾ|

 ಜೀವಿನಃ ದುಃಖ ನಾಶಾರ್ಥಂ

 ಸ್ಥಿತಾ ತ್ರ ಮಹಾಂಗಣೇ ||

 ಮಹೇಶನ ಪ್ರಾಣವಲ್ಲಬೆಯೂ, ಮಹಾದೇವಿಯೂ ಆದ ಅನ್ನಪೂರ್ಣೇಯು ಜೀವಿಗಳ ದುಃಖ ಸಮನಕ್ಕಾಗಿ ಆ ಮಹಾ ಪ್ರದೇಶದಲ್ಲಿ ನೆಲೆ ನಿಂತಳು.

 ಅನ್ನದಾ ಪನಾದಾ ದೇವೀ

 ಜೀವಿನಾಮ ಭಯಂಕರೀ |

 ಪೊರಾನಾಡು ಇತಿವಿಪಿನೇ

 ಸ್ಥಿತಾ  ಲೋಕ ಹಿತಾಯ ಚ ||

 ಅನ್ನದಾತೆಯೂ, ಜಲದಾತೆಯೂ ದೇವಿಯೂ, ಜೀವಿಗಳಿಗೆ ಅಭಯ ನೀಡುವವಳೂ ಆಗ ಅನ್ನಪೂರ್ಣೇಶ್ವರಿಯು ಪೊರನಾಡು ಎಂಬ ಮಹಾರಣ್ಯದಲ್ಲಿ ಲೋಕಹಿತಕ್ಕಾಗಿ ನಿಂತಳು.

 ಅಗಸ್ತ್ಯೋ ನಾಮ ಮಹರ್ಷಿಃ

 ಯಾತ್ರಾರ್ಥೀ ಸನ್ ಪ್ರಸ್ಥಿತಃ |

 ದೇವಿಂ ಅನ್ನಪೂರ್ಣಾಂ ವೀಕ್ಷ್ಯ

 ಆನಂದಪೂರತೋಭವತ್ಪುರ ||

 ಅಗಸ್ತ್ಯ ಮಹರ್ಷಿಗಳು ಯಾತ್ರಾರ್ಥಿಯಾಗಿ ಹೊರಟು ಇಲ್ಲಿ ದೇವಿ ಅನ್ನಪೂರ್ಣೆಯನ್ನು ನೋಡಿ ಆನಂದ ಪೂರ್ಣರಾದರು.

 ದೇವಿ ಮನ್ನ ಪೂರ್ಣಾಂ  ನತ್ವಾ

 ನಾನಾದ್ರೆವ್ಯ್ಯೆ ರಪೂಜಯೇತ್ |

 ಅಶೋಕಾದಿ ಗಂಧ ಪುಫ್ರೈ

 ದೇವೀಮರ್ಚಯತ್ ಮುದಾ|| 

 ದೇವಿ ಅನ್ನಪೂರ್ಣಗೆ ನಮಸ್ಕರಿಸಿ ನಾನಾ ದ್ರವ್ಯಗಳಿಂದ ಅರರ್ಚಿಸಿದರು.ಅಶೋಕ ಮೊದಲಾದ ಪರಿಮಳದ ಹೂವುಗಳಿಂದ ದೇವಿಯನ್ನು ಪೂಲೂಜಿಸಿದರು.

 ದಕ್ಷಿಣ ಕಾಶೀತಿ ಖ್ಯಾತಂ

 ಭದ್ರಾ ತೀರೇ ಪ್ರವಾಧಿತಮ್ |

 ಅತ್ರ್ವೈವ ಕಲಶೇಶಾಖ್ಯಃ

 ಸ್ಥಿತವಾನ್ ಜಗದೀಶ್ವರಃ ||

 ಇದು ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿವಾಗಿದೆ. ಇಲ್ಲಿಯೇ ವಿಶ್ವೇಶ್ವರನು ಕಾಲೖಶೇಶ್ವರನೆಂಬ ಹೆಸರಿನಿಂದ ಪ್ರಖ್ಯಾತನಾಗಿದ್ದಾನೆ.

 ಭೂಪಾಲಃ ಶೃತಬಿಂದ್ವಾಖ್ಯಃ

 ಸ್ವಪಾಪ ಶಮನಾಯ ಚ ¡

 ಪಂಚ ಸ್ನನಗಟ್ಟ ನಂತರ

 ಆಕಾರಯನ್ಮಹಾವನೇ ||

 ಶೃತಬಿಂದುವೆಂಬರಾಜನು ತನ್ನ ಪಾಪ ವಿಮೋಚನೆಗಾಗಿ ಈ ಮಹಾಮನದಲ್ಲಿ ಐದು ಸ್ಥಾನ ಘಟ್ಟಗಳನ್ನು ಸ್ಥಾಪಿಸಿದನು.

 ಅಂಬಾಘಟ್ಟಃ ಕಾಶ್ಚಿ ದೇಖ

 ಸ್ನಾನಘಟ್ಟೇಷು ಪಾವನಂ |

 ವಾರಿಪಾತೇನ ಸಂಯುಕ್ತ

 ಶುದ್ಧಸ್ಪಟಿಕ  ನಿರ್ಮಲಃ ||

 ಅಂಬ ಘಟ್ಟವೆಂಬುದು ಸ್ಥಾನ ಘಟಕಗಳಲ್ಲಿ ಪಾವನವಾಗಿದೆ. ಆ ಘಟಕವು ಪಾತಾಲದಿಂದ ಕೂಡಿದ್ದು ಶುದ್ದ ಸ್ಪಟಿಕ ನಿರ್ಮಲವಾಗಿದೆ.

 ತತ್ರಾಸ್ತಿ ಶಿಲಾಮಹತೀ

 ಮಾಧವಾಖ್ಯೇನ ಶೋಭಿತಾ|[

 ನಾನಾ ಸರಃ ವಿಶೇಷೇಣ

 ಶೋಭಿತ ಮತ್ರ ಭೂತಲೇ,|| 

 ಇಲ್ಲಿ ಮಾಧವನೆಂಬ ಮಹಾ ಶಿಲೆ ಇದೆ.. ಇಲ್ಲಿ ವಿಶೇಷವಾದ ಹಲವಾರು ಸರೋವರಗಳಿದ್ದು ಭೂಮಿಯಲ್ಲಿ ಶೋಭಿಸುತ್ತವೆ.