ಪದ್ಮ : ರೀ ನಿಮ್ಮ ಸ್ನೇಹಿತ ವೆಂಕಿ, ಪಕ್ಕದ ಮನೆ ಹುಡುಗೀನ ಮದುವೆ ಆಗ್ತಾನಂತೆ.
ವಾಸು : ಆಗ್ಲಿ ಬಿಡು ಅದು ಅವನಿಷ್ಟ
ಪದ್ಮ :ಹಾಗಲ್ರೀ,ಆ ಹುಡ್ಡುಗಿ ಮಹಾ ಜಗಳಗಂಟಿ,ತುಂಬಾ ತರ್ಲೆ ಬೇಡಾ ಅಂತ ಬುದ್ಧಿ ಹೇಳಿ.
ವಾಸು : ಅವನಿಗೆ ನಾನೇನೂ ಹೇಳಲ್ಲ.
ಪದ್ಮ : ಯಾಕೆ ಅವರು ನಿಮ್ಮ ಆತ್ಮ ಸ್ನೇಹಿತರಲ್ಲವೇ..?
ವಾಸು : ನಾನ್ಯಾಕೆ ಹೇಳಲಿ ನಾನು ನಿನ್ನ ಮದುವೆಯಾದಾಗ ಅವನು ನನಗೆ ಬುದ್ಧಿ ಹೇಳಿದ್ನಾ?
***
ಜಡ್ಜ್ : ನೋಡಯ್ಯ ವಾಸು ತೀರ್ಪು ಕೊಡುವ ಮುಂಚೆ ನೀನೇನಾದರೂ ಕೋರ್ಟಿಗೆ ಅರ್ಪಿಸುವುದಿದ್ದರೆ ಅರ್ಪಿಸಿಬಿಡು.
ವಾಸು : ಸದ್ಯಕ್ಕೆ ಸಾಧ್ಯವಿಲ್ಲಾ? ಸ್ವಾಮಿ.
ಜಡ್ಜ್ ಏಕೆ ಸಾಧ್ಯವಿಲ್ಲಾ?
ವಾಸು : ನನ್ನ ಜೇಬಿನಲ್ಲಿದ್ದ ಎಲ್ಲಾ ಹಣಾನ್ನು ಈ ಆ ಲಾಯರ್ ಕಸ್ಕೊಂಡುಬಿಟ್ಟ ಈಗ ನಾನು ಏನೆನ್ನು ಅರ್ಪಿಸಲಿ?
****
ಇಬ್ಬರು ಸ್ನೇಹಿತರಿದ್ದರು. ಒಬ್ಬನು ಚೆನ್ನಾಗಿ ದುಡಿದು, ಕಷ್ಟಪಟ್ಟು ಹಣ ಗಳಿಸಿ ಸುಖವಾಗಿದ್ದ.ಇನ್ನೊಬ್ಬ ಸೋಮಾರಿ ಸುಮ್ಮನೆ ಕುಳಿತಿರುತ್ತಿದ್ದ ಶ್ರೀಮಂತ ಗೆಳೆಯನ ಅವನ ಆಲಸಿ ಸ್ನೇಹಿತನಿಗೆ ಹೇಳಿದ. ಹೀಗೇಕೆ ಸುಮ್ಮನೆ ಕುಳಿತಿರುತ್ತಿ. ಏನಾದರೂ ಕೆಲಸ ಮಾಡಿ ಹಣ ಗಳಿಸಿ ಆರಾಮ ಇರಬಾರದೇ ಈಗ ನಾನು ಆರಾಮ ಇದ್ದೇನಲ್ಲ ಎಂದ ಆಲಸಿ ಗೆಳೆಯ.