ಜ್ಯೋತಿ : ನೋಡಿ ಜ್ಯೋತಿಷಿಗಳೇ,ನಾನು ಗರ್ಭಿಣಿ ಈಗ ಹುಟ್ಟೋ ಮಗುವಿನಿಂದ ಗ್ರಹಗತಿಯಿಂದ ಒಳ್ಳೆದಾಗುತ್ತೆ ತಾನೇ?
ಜ್ಯೋತಿಷಿ : ಒಳ್ಳೆಯದಾಗುವುದಿಲ್ಲ.
ಜ್ಯೋತಿ : ಏನಾಗುತ್ತೆ
ಜ್ಯೋತಿಷಿ : ಮಗು ಹುಟ್ಟಿದ ತಕ್ಷಣ ಮಗುವಿನ ತಂದೆ ಸತ್ತು ಹೋಗುತ್ತಾನೆ
ಜ್ಯೋತಿ : ಸಾಕು ಬಿಡಿ ನನ್ನ ಗಂಡನಿಗೇನೂ ಆಗೋದಿಲಾ.
***
ಜ್ಯೋತಿ : ನೋಡಿ ಇದೇ ಕೊನೆ, ಇಮ್ಮುಂದೆ ಕುದುರೆ ಜೂಜಿಗೆ ಹೋಗಬಾರದು.
ವಾಸು : ಜೂಜಾಡೋದ್ರಲ್ಲಿ ಏನೇ ತಪ್ಪೂ? ಮಹಾಭಾರತದಲ್ಲಿ ನೋಡು ಧರ್ಮರಾಯ ಜೂಜಾಡಲಿಲ್ವೇ?
ಜ್ಯೋತಿ : ಓಹೋ!ಹಾಗೋ,ದ್ರೌಪದಿಗೆ ಐದು ಜನ ಗಂಡಂದಿರು. ಆ ಪ್ರಯೋಗ ಮಾಡ್ಲಾ?
***
ವಾಸು : ಡಾಕ್ಟ್ರೇ ಆಕ್ಸಿಡೆಂಟ್ ನಲ್ಲಿ ನಂಗೆ ತುಂಬಾ ಏಟಾಗಿದೆಯಾ?
ಡಾಕ್ಟರ್ : ಹೌದು,ತುಂಬಾ ಏಟಾಗಿದೆ ಹೊಲಿಗೆ ಹಾಕಲೇಬೇಕು.
ವಾಸು : ಹೊಲಿಗೆ ಹಾಕೋಕೆ ಇಷ್ಟಾ ಗುತ್ತೆ.?
ಡಾಕ್ಟರ್ : ಇದು 1000 ರೂಪಾಯಿಯಾಗುತ್ತೆ.
ವಾಸು : ಬರೀ ಹೊಲಿಗೆ ಹಾಕಿ ಸಾಕು, ಎಂಬ್ರಾಯಿಡರಿ ಏನು ಬೇಡ