ಮನೆ ಅಪರಾಧ ಹುಬ್ಬಳ್ಳಿ:  ಗಾಂಜಾ ಮತ್ತಿನಲ್ಲಿ ಇಬ್ಬರಿಗೆ ಚಾಕು ಇರಿತ

ಹುಬ್ಬಳ್ಳಿ:  ಗಾಂಜಾ ಮತ್ತಿನಲ್ಲಿ ಇಬ್ಬರಿಗೆ ಚಾಕು ಇರಿತ

0

ಹುಬ್ಬಳ್ಳಿ:ಹುಬ್ಬಳ್ಳಿಯ ವಿಜಯನಗರದ ವಡ್ಡರ ಓಣಿಯಲ್ಲಿ ಗಾಂಜಾ ಮತ್ತಿನಲ್ಲಿ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿಯಲಾಗಿದೆ. ಸಂಜಯ್​​, ಸೈಫ್​ ಎಂಬ ಇಬ್ಬರು ಯುವಕರಿಗೆ ಯುಪಿ, ಬಿಹಾರ ಮೂಲದ ಪುಂಡರ ಗ್ಯಾಂಗ್​​ ಚಾಕುವಿನಿಂದ ಇರಿದು ಅಟ್ಟಹಾಸ ಮೆರೆದಿದೆ.

Join Our Whatsapp Group

ನಾಗೇಂದ್ರ, ಅನಿಕೇತ್​​, ಸರವನ್​​, ಬಬ್ಲೂಚೌಹಾಣ್​ನಿಂದ ಕೃತ್ಯ ನಡೆದಿದೆ. ಈ ಬಿಹಾರಿ ಪುಂಡರು ಮದ್ಯ ಸೇವಿಸಿ, ಗಾಂಜಾ ಮತ್ತಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದರು. ಇದನ್ನು ಪ್ರಶ್ನೆ ಮಾಡಲು ಹೋಗಿದ್ದ ಯುವಕರಿಗೆ ಚಾಕು ಇರಿಯಲಾಗಿದೆ. ಹುಬ್ಬಳ್ಳಿಯ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.